ಭಾರತ-ಚೀನಾ ವಿವಾದ: ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿದ್ದೇನು..?

masthmagaa.com:

ಅಮೆರಿಕ: ಭಾರತ-ಚೀನಾ ಗಡಿ ವಿಚಾರದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಚೀನಾ ವಿರುದ್ಧ ಹರಿಹಾಯ್ದಿದ್ದಾರೆ. ಗಡಿಯಲ್ಲಿ ಚೀನಾ ಮಾಡುತ್ತಿರುವ ಕೆಲಸ ತುಂಬಾ ಅಸಹ್ಯಕರವಾಗಿದೆ. ಈ ವಿಚಾರದಲ್ಲಿ ನಾವು ಏನಾದ್ರೂ ಮಾಡಲು ಸಾಧ್ಯವಿದ್ರೆ, ನಾವು ಈ ವಿವಾದದಲ್ಲಿ ಮಧ್ಯಪ್ರವೇಶಿಸಿ, ಸಹಾಯ ಮಾಡಲು ಇಷ್ಟ ಪಡುತ್ತೇವೆ. ಈಗಾಗಲೇ ಎರಡೂ ದೇಶಗಳೊಂದಿಗೆ ಮಾತನಾಡುತ್ತಿದ್ದೇವೆ ಅಂದ್ರು. ಇದೇ ವೇಳೆ ಕೊರೋನಾವನ್ನು ಚೀನೀ ವೈರಸ್ ಎಂದು ಕರೆದ ಡೊನಾಲ್ಡ್​ ಟ್ರಂಪ್​​, ಕೊರೋನಾ ವಿಚಾರದಲ್ಲಿ ಚೀನಾ ಏನು ಮಾಡಿತು ಅನ್ನೋದನ್ನ ವಿಶ್ವದ ಇತರೆ ದೇಶಗಳು ನೋಡಬೇಕು. ವಿಶ್ವದ 188 ದೇಶಗಳ ಜೊತೆ ಚೀನಾ ಮಾಡಿದ್ದೇನು ಅನ್ನೋದನ್ನು ಎಲ್ಲರೂ ಗಮನಿಸಬೇಕು ಅಂದ್ರು.

ಈ ಹಿಂದೆ ಲಡಾಕ್ ಸಂಘರ್ಷದ ಸಮಯದಲ್ಲೂ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಭಾರತ-ಚೀನಾ ನಡುವೆ ಮಾತುಕತೆಗೆ ಸಿದ್ಧ ಅಂತ ಹೇಳಿದ್ರು. ನೇರವಾಗಿ ಭಾರತಕ್ಕೆ ಬೆಂಬಲ ಘೋಷಿಸಿರಲಿಲ್ಲ.. ಈಗಲೂ ಟ್ರಂಪ್ ಅದೇ ರೀತಿಯ ಹೇಳಿಕೆ ಕೊಟ್ಟಿದ್ದಾರೆ.

-masthmagaa.com

 

Contact Us for Advertisement

Leave a Reply