masthmagaa.com:

ಜಾಗತಿಕ ಪಿಡುಗಾಗಿರೋ ಕೊರೋನಾ ವೈರಸ್​ಗೆ ಔಷಧಿ ಕಂಡುಹಿಡಿಯಲು ವಿವಿಧ ದೇಶಗಳ ವಿಜ್ಞಾನಿಗಳು ಸತತ ಪ್ರಯತ್ನ ನಡೆಸುತ್ತಿದ್ದಾರೆ. ಅಮೆರಿಕದವರು ಔಷಧಿ ಕಂಡು ಹಿಡಿದ್ರು, ಚೀನಾದವರು ಕಂಡುಹಿಡಿದ್ರು ಅಂತ ವರದಿಯಾಗ್ತಿದೆ. ಆದ್ರೆ ಎಲ್ಲವೂ ಪರೀಕ್ಷಾ ಹಂತದಲ್ಲಿದೆ. ಇದುವರೆಗೆ ಕೊರೋನಾ ಕಾಯಿಲೆಗೆ ಅಂತಾನೇ ನಿರ್ದಿಷ್ಟ ಔಷಧಿ ಸಿದ್ಧವಾಗಿಲ್ಲ. ಕೆಲ ದೇಶಗಳು ಬೇರೆ ಬೇರೆ ಕಾಯಿಲೆಗೆ ನೀಡುವ ಔಷಧಿಯನ್ನೇ ಕೊರೋನಾ ರೋಗಿಗಳ ಮೇಲೆ ಪ್ರಯೋಗ ಮಾಡ್ತಿದೆ. ಭಾರತದಲ್ಲಿ ಮಲೇರಿಯಾಗೆ ನೀಡುವ ಹೈಡ್ರಾಕ್ಸಿಕ್ಲೋರೋಕ್ವಿನ್​ ಔಷಧಿಯನ್ನ ಪ್ರಯೋಗಿಸಲಾಗ್ತಿದೆ. ಆದ್ರೆ ಇದನ್ನ ರೋಗಿಯ ಸ್ಥಿತಿ ತುಂಬಾ ಗಂಭೀರವಾದಾಗ ಮಾತ್ರ ಬಳಸಬೇಕು. ಅಲ್ಲದೆ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರು ಮಾತ್ರ ಬಳಸಬೇಕು ಅಂತ ಐಸಿಎಂಆರ್ ಹೇಳಿದೆ.

ಇದೀಗ ಕೊರೋನಾದಿಂದ ತತ್ತರಿಸಿರೋ ಅಮೆರಿಕ ಕೂಡ ತನ್ನ ರೋಗಿಗಳ ಮೇಲೆ ಹೈಡ್ರಾಕ್ಸಿಕ್ಲೋರೋಕ್ವಿನ್​ ಔಷಧಿಯನ್ನ ಪ್ರಯೋಗಿಸಲು ಮುಂದಾಗಿದೆ. ಈ ಬಗ್ಗೆ ಮಾತನಾಡಿರೋ ಅಮೆರಿಕ ಉಪಾಧ್ಯಕ್ಷ ಮೈಕ್​ ಪೆನ್ಸ್, ಮಿಚಿಗನ್​ನ ಆಸ್ಪತ್ರೆಯಲ್ಲಿರೋ 3,000 ರೋಗಿಗಳ ಮೇಲೆ ಮಲೇರಿಯಾಗೆ ನೀಡುವ ಔಷಧಿಯನ್ನ ಪ್ರಯೋಗಿಸಲಾಗುವುದು ಅಂತ ಹೇಳಿದ್ದಾರೆ.

ಶ್ವೇತಭವನದಲ್ಲಿ ಮಾತನಾಡಿದ ಅವರು ಈ ಪ್ರಯೋಗದಿಂದ ಹೊರಬರುವ ಫಲಿತಾಂಶವನ್ನ ನೋಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಅಲ್ಲದೆ  ಆಸ್ಪತ್ರೆ ಹಾಗೂ ಮೆಡಿಕಲ್​ಗಳಲ್ಲಿ ಹೈಡ್ರಾಕ್ಸಿಕ್ಲೋರಿನ್ ಲಭ್ಯವಾಗುವಂತೆ ಮಾಡಲು ಸರ್ಕಾರ ಪೂರ್ವಸಿದ್ಧತೆ ಮಾಡಿಕೊಂಡಿದೆ ಎಂದಿದ್ದಾರೆ.

ಇತ್ತೀಚೆಗಷ್ಟೇ ಪ್ರಧಾನಿ ಮೋದಿಗೆ ದೂರವಾಣಿ ಕರೆ ಮಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್, ಹೈಡ್ರಾಕ್ಸಿಕ್ಲೋರಿನ್ ಔಷಧಿಯನ್ನ ಪೂರೈಸುವಂತೆ ಮನವಿ ಮಾಡಿದ್ದರು. ಅದರಂತೆ ಭಾರತ ಸರ್ಕಾರ ಕೊರೋನಾದಿಂದ ನಲುಗಿ ಹೋಗಿರೋ ಅಮೆರಿಕಕ್ಕೆ ಔಷಧಿಯನ್ನ ಪೂರೈಕೆ ಮಾಡಿತ್ತು.
-masthmagaa.com
Contact Us for Advertisement

Leave a Reply