masthmagaa.com:

ಅಮೆರಿಕದಲ್ಲಿ ಕಾಡ್ಗಿಚ್ಚಿನಂತೆ ಹಬ್ಬುತ್ತಿರುವ ಕೊರೋನಾ ವೈರಸ್​ ಶುಕ್ರವಾರ ಒಂದೇ ದಿನ 1,480 ಜನರನ್ನು ಬಲಿ ಪಡೆದಿದೆ. ಒಂದೇ ದಿನದಲ್ಲಿ ಇಷ್ಟು ಜನ ಮೃತಪಟ್ಟಿರೋದು ಇದೇ ಮೊದಲು. ಈ ಮೂಲಕ ಅಮೆರಿಕದಲ್ಲಿ ಕೊರೋನಾ ಸೋಂಕಿಗೆ ಪ್ರಾಣ ಕಳೆದುಕೊಂಡವರ ಸಂಖ್ಯೆ 7,100ರ ಗಡಿ ದಾಟಿದೆ. ಅಲ್ಲದೆ ಒಂದೇ ದಿನದಲ್ಲಿ 32,000 ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದು, ಸೋಂಕಿತರ ಸಂಖ್ಯೆ 2.80 ಲಕ್ಷಕ್ಕೆ ಏರಿಕೆಯಾಗಿದೆ. ಈ ಪೈಕಿ ಸುಮಾರು 10 ಸಾವಿರ ಮಂದಿ ಗುಣಮುಖರಾಗಿದ್ದಾರೆ.

ಕೊರೋನಾ ಸೋಂಕಿನ ಎಪಿಸೆಂಟರ್ ಆಗಿರೋ ನ್ಯೂಯಾರ್ಕ್​ವೊಂದರಲ್ಲೇ 1 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದೃಢಪಟ್ಟಿದೆ. ಜೊತೆಗೆ ಅಮೆರಿಕದಲ್ಲಿ ಸಂಭವಿಸಿದ 7,100 ಸಾವುಗಳಲ್ಲಿ 3,200 ಜನ ನ್ಯೂಯಾರ್ಕ್​​ನಲ್ಲೇ ಮೃತಪಟ್ಟಿದ್ದಾರೆ. ಈ ಹಿನ್ನೆಲೆ ಅಮೆರಿಕನ್ನರು ಮುಖಕ್ಕೆ ಮಾಸ್ಕ್​ ಧರಿಸುವಂತೆ ಸರ್ಕಾರ ಸೂಚಿಸಿದೆ. ಆದ್ರೆ ತಾವು ಮಾಸ್ಕ್ ಧರಿಸಲ್ಲ ಅಂತ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಹೇಳಿಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply