masthmagaa.com:

ಕೊರೋನಾ ಹಿನ್ನೆಲೆ ದೇಶದಾದ್ಯಂತ ಬಂದ್‌ ಆಗಿರುವ ಯುನಿವರ್ಸಿಟಿ ಮತ್ತು ಕಾಲೇಜುಗಳು ಒಂದೊಂದಾಗಿ ಓಪನ್ ಆಗುತ್ತಿವೆ. ಕರ್ನಾಟಕದಲ್ಲಿ ನವೆಂಬರ್ 17ರಿಂದ ಡಿಗ್ರಿ, ಪಿಜಿ, ಎಂಜಿನಿಯರಿಂಗ್ ಮತ್ತು ಡಿಪ್ಲೊಮಾ ಕಾಲೇಜುಗಳು ಆರಂಭವಾಗಲಿದೆ ಅಂತ ಸರ್ಕಾರ ಹೇಳಿದೆ. ಇದೀಗ ಕಾಲೇಜು ಆರಂಭದ ಬಗ್ಗೆ ವಿಶ್ವವಿದ್ಯಾಲಯ ಧನಸಹಾಯ ಆಯೋಗವು (UGC) ಮಾರ್ಗಸೂಚಿ ಬಿಡುಗಡೆ ಮಾಡಿದೆ. ಮಾರ್ಗಸೂಚಿಯಲ್ಲಿರುವ ಕೆಲವೊಂದು ಪ್ರಮುಖ ಅಂಶಗಳು ಇಲ್ಲಿವೆ ನೋಡಿ.

– ಕೇಂದ್ರೀಯ ವಿಶ್ವವಿದ್ಯಾಲಯ ಮತ್ತು ಕೇಂದ್ರ ಸರ್ಕಾರಿ ಅನುದಾನಿಕ ಶೈಕ್ಷಣಿಕ ಸಂಸ್ಥೆಗಳ ಆರಂಭದ ನಿರ್ಧಾರವನ್ನ ಆಯಾ ಕುಲಪತಿಗಳು ಹಾಗೂ ಮುಖ್ಯಸ್ಥರ ವಿವೇಚನೆಗೆ ಬಿಡಲಾಗಿದೆ. ಹಾಗೆಯೇ ರಾಜ್ಯ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ಆರಂಭದ ನಿರ್ಧಾರವನ್ನ ಆಯಾ ರಾಜ್ಯ ಸರ್ಕಾರಗಳಿಗೆ ಬಿಡಲಾಗಿದೆ.

– ವಿವಿ ಅಥವಾ ಕಾಲೇಜುಗಳು ಕಂಟೈನ್ಮೆಂಟ್‌ ಝೋನ್​ ಹೊರಗಿದ್ದರೆ ಮಾತ್ರ ಆರಂಭಕ್ಕೆ ಅವಕಾಶ. ಕಂಟೈನ್ಮೆಂಟ್‌ ಝೋನ್‌ಗಳಿಗೆ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಭೇಟಿ ನೀಡದಂತೆ ಸೂಚಿಸಬೇಕು.

– ಹಂತಹಂತವಾಗಿ ಕ್ಯಾಂಪಸ್‌ಗಳನ್ನ ತೆರೆಯಬೇಕು.

– ತರಗತಿ ಕೊಠಡಿಗಳಲ್ಲಿ ಸಾಮಾಜಿಕ ಅಂತರ, ಫೇಸ್‌ ಮಾಸ್ಕ್‌, ಸ್ಯಾನಿಟೈಸರ್‌ ಬಳಕೆ, ಥರ್ಮಲ್‌ ಸ್ಕ್ರೀನಿಂಗ್‌ ಕಡ್ಡಾಯ.

– ಒಂದು ಕ್ಲಾಸ್​ ರೂಂನಲ್ಲಿ ಶೇ. 50ರಷ್ಟು ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ.

– ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಆರೋಗ್ಯ ಸೇತು ಅಪ್ಲಿಕೇಶನ್​‌ ಡೌನ್​ಲೋಡ್‌ ಮಾಡಿಕೊಳ್ಳಬೇಕು.

– ಕಾಲೇಜು ಬಸ್‌ಗಳನ್ನ ಸ್ಯಾನಿಟೈಸ್‌ ಮಾಡ್ಬೇಕು. ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಶುಚಿತ್ವ ಕಾಪಾಡಿಕೊಳ್ಳಬೇಕು.

– ವಿದೇಶಿ ವಿದ್ಯಾರ್ಥಿಗಳು ಮತ್ತು ಕಾಲೇಜಿಗೆ ಬರಲು ಆಗದವರಿಗೆ ಆನ್‌ಲೈನ್‌ ಶಿಕ್ಷಣ ವ್ಯವಸ್ಥೆ ಮಾಡಬೇಕು.

– ಹೊರ ರಾಜ್ಯದಿಂದ ಬರುವವರಿಗೆ ಕೊರೋನಾ ನೆಗೆಟಿವ್‌ ಇದ್ದರೂ 14 ದಿನಗಳ ಕ್ವಾರಂಟೈನ್ ಕಡ್ಡಾಯ.

– ಕಾಲೇಜು ಆವರಣದಲ್ಲಿ ಉಗುಳುವುದು ನಿಷಿದ್ಧ.

– ಸ್ವಿಮ್ಮಿಂಗ್‌ ಪೂಲ್‌ ಇದ್ದರೆ ಅದನ್ನ ತೆರೆಯಲು ಅವಕಾಶವಿಲ್ಲ.

– AC ವ್ಯವಸ್ಥೆಯು 24ರಿಂದ 30 ಡಿಗ್ರಿ ಮಿತಿಯೊಳಗೆ ಇರಬೇಕು.

– ತುಂಬಾ ಅನಿರ್ವಾಯವಿದ್ದರೆ ಮಾತ್ರ ಹಾಸ್ಟೆಲ್‌ ತೆರೆಯಬೇಕು.

– ಹಾಸ್ಟೆಲ್‌ ರೂಮ್‌ನಲ್ಲಿ ಶೇರಿಂಗ್‌ ಬದಲು ಒಬ್ಬ ವಿದ್ಯಾರ್ಥಿಗೆ ಅವಕಾಶ ನೀಡಬೇಕು.

– ರೋಗ ಲಕ್ಷಣ ಇದ್ದವರಿಗೆ ಹಾಸ್ಟೆಲ್​‌ ಪ್ರವೇಶಕ್ಕೆ ಅವಕಾಶ ನೀಡಬಾರದು.

-masthmagaa.com

Contact Us for Advertisement

Leave a Reply