masthmagaa.com:

ಕೊರೋನಾ ಹಾವಳಿ ಹಿನ್ನೆಲೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC) ಕಾಲೇಜು ಮತ್ತು ಯುನಿವರ್ಸಿಟಿಗಳನ್ನು ತೆರೆಯುವ ಬಗ್ಗೆ ಪರಿಷ್ಕೃತ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಪ್ರಥಮ ವರ್ಷದ ಪದವಿ ಪೂರ್ವ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷವನ್ನು ಬದಲಾವಣೆ ಮಾಡಲಾಗಿದೆ. ಜೊತೆಗೆ ಹಲವು ವಿಚಾರಗಳನ್ನು ಉಲ್ಲೇಖಿಸಲಾಗಿದೆ. ಈ ಬಗ್ಗೆ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಮಾಹಿತಿ ನೀಡಿದ್ದಾರೆ.

– ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಅಥವಾ ಫ್ರೆಶರ್ಸ್​ಗೆ ನವೆಂಬರ್ 1ರಿಂದ ಶೈಕ್ಷಣಿಕ ವರ್ಷ ಆರಂಭವಾಗಲಿದೆ. ಅಂದ್ರೆ ನವೆಂಬರ್​ 1ರಿಂದ ಮೊದಲ ಸೆಮಿಸ್ಟರ್ ಆರಂಭ.

– ಒಂದ್ವೇಳೆ ನವೆಂಬರ್​ 1ರಿಂದ ಕಾಲೇಜು ಓಪನ್​ ಮಾಡುವ ಬಗ್ಗೆ ಕೇಂದ್ರ ಗೃಹ ಇಲಾಖೆಯಿಂದ ಅಂತಿಮ ನಿರ್ಧಾರ ಹೊರಬೀಳದಿದ್ದರೆ, ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಆನ್​ಲೈನ್​ನಲ್ಲೇ ಶಿಕ್ಷಣ ಆರಂಭವಾಗಲಿದೆ.

– ಶೈಕ್ಷಣಿಕ ವರ್ಷ ತಡವಾಗಿ ಆರಂಭವಾಗುತ್ತಿರೋದ್ರಿಂದ ಇದೇ ಬ್ಯಾಚ್​ನ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷವೂ ತಡವಾಗಿ ಆರಂಭವಾಗಬಹುದು.

– ಶೈಕ್ಷಣಿಕ ವರ್ಷ ತಡವಾಗಿ ಆರಂಭವಾಗುವುದರಿಂದ ಎಲ್ಲಾ ಕಾಲೇಜುಗಳು ವಾರಕ್ಕೆ 6 ದಿನ ಕಡ್ಡಾಯವಾಗಿ ಪಾಠ ಮಾಡಬೇಕು.

– ಮುಂದಿನ ಎರಡು ಶೈಕ್ಷಣಿಕ ವರ್ಷಗಳ ಕಾಲ ಬೇಸಿಗೆಗಾಲದ ರಜೆ ಮತ್ತು ಚಳಿಗಾಲದ ರಜೆ ಇರುವುದಿಲ್ಲ. ವಿದ್ಯಾರ್ಥಿಗಳು 3 ವರ್ಷಗಳ ಒಳಗೆ ತಮ್ಮ ಕೋರ್ಸ್ ಪೂರ್ಣಗೊಳಿಸುವಂತೆ ಮಾಡುವುದು ಯುಜಿಸಿ ಉದ್ದೇಶ.

– ಮೊದಲ ವರ್ಷದ ವಿದ್ಯಾರ್ಥಿಗಳ ಅಡ್ಮಿಷನ್ ಪ್ರಕ್ರಿಯೆ ಅಕ್ಟೋಬರ್ 31ರೊಳಗೆ ಪೂರ್ಣಗೊಳ್ಳಬೇಕು.

– ನವೆಂಬರ್​ 30ರೊಳಗೆ ಯಾವುದೇ ವಿದ್ಯಾರ್ಥಿ ತನ್ನ ಅಡ್ಮಿಷನ್ ವಾಪಸ್ ಪಡೆದುಕೊಂಡರೆ ಅಂಥವರಿಗೆ ಸಂಪೂರ್ಣ ಹಣವನ್ನು ರಿಫಂಡ್ ಮಾಡಬೇಕು. ಇಂತಹ ಸಂದರ್ಭದಲ್ಲಿ ಯಾವುದೇ ಕ್ಯಾನ್ಸಲೇಷನ್ ಫೀಸ್ ವಿಧಿಸಬಾರದು.

– ಡಿಸೆಂಬರ್ 31ರೊಳಗೆ ಯಾವುದೇ ವಿದ್ಯಾರ್ಥಿ ತನ್ನ ಅಡ್ಮಿಷನ್ ವಾಪಸ್ ಪಡೆದುಕೊಂಡರೆ ಅಂಥವರಿಂದ ಗರಿಷ್ಟ 1,000 ರೂಪಾಯಿಗಿಂತ ಹೆಚ್ಚು ಶುಲ್ಕ ಪಡೆಯುವಂತಿಲ್ಲ. ಉಳಿದ ಹಣವನ್ನು ರಿಫಂಡ್ ಮಾಡಬೇಕು.

– 2021ರ ಮಾರ್ಚ್​ನಲ್ಲಿ ಮೊದಲ ಸೆಮಿಸ್ಟರ್​ನ ಪರೀಕ್ಷೆಗಳು ನಡೆಯಲಿವೆ.

– 2021ರ ಏಪ್ರಿಲ್​ 5ರಿಂದ 2ನೇ ಸೆಮಿಸ್ಟರ್ ಆರಂಭವಾಗಲಿದೆ.

– 2021ರ ಆಗಸ್ಟ್​ನಲ್ಲಿ 2ನೇ ಸೆಮಿಸ್ಟರ್​ನ ಪರೀಕ್ಷೆಗಳು ನಡೆಯಲಿವೆ.

– 2021ರ ಆಗಸ್ಟ್​ 30ರಂದು ಇದೇ ಬ್ಯಾಚ್​ನ ವಿದ್ಯಾರ್ಥಿಗಳಿಗೆ ಎರಡನೇ ಶೈಕ್ಷಣಿಕ ವರ್ಷ (3ನೇ ಸೆಮಿಸ್ಟರ್) ಆರಂಭವಾಗಲಿದೆ.

-masthmagaa.com

Contact Us for Advertisement

Leave a Reply