masthmagaa.com:

ನೂತನ ಕೃಷಿ ಕಾನೂನುಗಳಿಗೆ ಸಂಬಂಧಿಸಿದಂತೆ ದೆಹಲಿ ಗಡಿ ಭಾಗದಲ್ಲಿ ರೈತರ ಪ್ರತಿಭಟನೆ ಮುಂದುವರಿದಿರುವ ನಡುವೆಯೇ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ರೈತರಿಗೊಂದು ಓಪನ್ ಲೆಟರ್ ಬರೆದಿದ್ದಾರೆ. ಇದರಲ್ಲಿ, ‘ಹಲವು ಕೃಷಿ ಸಂಘಟನೆಗಳು ನೂತನ ಕಾನೂನುಗಳ ಬಗ್ಗೆ ಸಂತಸ ವ್ಯಕ್ತಪಡಿಸಿವೆ. ರೈತರಲ್ಲಿ ಹೊಸ ಆಶಾಭಾವ ಮೂಡಿದೆ. ದೇಶದ ಕೆಲವೊಂದು ಭಾಗಗಳಲ್ಲಿ ರೈತರು ಈ ಕಾನೂನುಗಳ ಲಾಭ ಪಡೆಯಲು ಶುರು ಕೂಡ ಮಾಡಿದ್ದಾರೆ. ಆದ್ರೆ ಈ ಕೃಷಿ ಸುಧಾರಣೆಗೆ ಸಂಬಂಧಿಸಿದಂತೆ ಕೆಲ ರೈತ ಸಂಘಟನೆಗಳಿಗೆ ತಪ್ಪು ಮಾಹಿತಿ ನೀಡುವ ಕೆಲಸ ನಡೀತಿದೆ’ ಅಂತ ಉಲ್ಲೇಖಿಸಿದ್ದಾರೆ. ಜೊತೆಗೆ ಈ ಕಾನೂನುಗಳ ಬಗ್ಗೆಗಿನ ಸುಳ್ಳೇನು, ಸತ್ಯವೇನು ಅನ್ನೋದನ್ನ ಪಾಯಿಂಟ್ ಬೈ ಪಾಯಿಂಟ್ ಹೇಳಿದ್ದಾರೆ.

– ಕನಿಷ್ಠ ಬೆಂಬಲ ಬೆಲೆ (MSP) ಇರಲ್ಲ ಅಂತಿದ್ದಾರೆ. ಆದ್ರೆ MSP ಇರುತ್ತೆ.

– ರೈತರ ಜಮೀನುಗಳನ್ನ ಕಿತ್ತುಕೊಳ್ತಾರೆ ಅಂತ ಹೇಳಲಾಗ್ತಿದೆ. ಆದ್ರೆ ರೈತರು ಬೆಳೆಗೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಳ್ತಾರೆಯೇ ಹೊರತು ಜಮೀನಿಗಲ್ಲ. ಭೂಮಿಯನ್ನ ಲೀಸ್​ಗೆ ಕೊಡೋದು ಅಥವಾ ಗಿರವಿ ಇಡೋಕು ಈ ಕಾನೂನುಗಳಲ್ಲಿ ಅವಕಾಶವಿಲ್ಲ.

– ಕಾಂಟ್ರಾಕ್ಟ್​ ಫಾರ್ಮಿಂಗ್​ನಲ್ಲಿ ರೈತರ ಬೆಳೆಗೆ ಎಷ್ಟು ಬೆಲೆ ಅನ್ನೋ ಗ್ಯಾರಂಟಿ ಇರಲ್ಲ ಅಂತ ಹೇಳಲಾಗ್ತಿದೆ. ಆದ್ರೆ ಫಾರ್ಮಿಂಗ್ ಅಗ್ರೀಮೆಂಟ್​ನಲ್ಲಿ ರೈತರ ಬೆಳೆಗಳನ್ನ ಎಷ್ಟು ಬೆಲೆ ಕೊಳ್ಳಲಾಗುತ್ತೆ ಅನ್ನೋದನ್ನ ಕೂಡ ನಮೂದಿಸಲಾಗಿರುತ್ತೆ.

– ರೈತರಿಗೆ ಸಮಯಕ್ಕೆ ಸರಿಯಾಗಿ ಹಣ ಪಾವತಿ ಮಾಡಲ್ಲ ಅಂತ ಹೇಳಲಾಗ್ತಿದೆ. ಆದ್ರೆ ಒಪ್ಪಂದದಲ್ಲಿ ನಿಗದಿಪಡಿಸಿದ ದಿನಾಂಕದೊಳಗೇ ರೈತರಿಗೆ ಹಣ ಪಾವತಿ ಮಾಡಬೇಕು. ಇಲ್ಲದಿದ್ರೆ ಕಾನೂನು ಕ್ರಮ ಕೈಗೊಳ್ಳಬಹುದು ಮತ್ತು ದಂಡ ವಿಧಿಸಬಹುದು.

– ರೈತರು ಕಾಂಟ್ರಾಕ್ಟ್ ಅಥವಾ ಒಪ್ಪಂದವನ್ನ ಅಂತ್ಯ ಮಾಡಲು ಸಾಧ್ಯವಿಲ್ಲ ಎನ್ನಲಾಗ್ತಿದೆ. ಆದ್ರೆ ರೈತರು ಯಾವ ಸಂದರ್ಭದಲ್ಲಾದ್ರೂ ಯಾವುದೇ ದಂಡವಿಲ್ಲದೆ ಕಾಂಟ್ರಾಕ್ಟ್ ಅಂತ್ಯಗೊಳಿಸಬಹುದು.

– ಈ ಹಿಂದೆ ಯಾವತ್ತೂ ಕಾಂಟ್ರಾಕ್ಟ್ ಫಾರ್ಮಿಂಗ್ ಮಾಡಿರಲಿಲ್ಲ ಎನ್ನಲಾಗ್ತಿದೆ. ಆದ್ರೆ ಕೆಲ ರಾಜ್ಯಗಳಲ್ಲಿ ಈಗಾಗಲೇ ಕಾಂಟ್ರಾಕ್ಟ್​ ಫಾರ್ಮಿಂಗ್ ಜಾರಿಯಲ್ಲಿದೆ. ಅಷ್ಟೇ ಯಾಕೆ ಅದಕ್ಕೆ ಸಂಬಂಧಿಸಿದ ಕಾನೂನುಗಳು ಕೂಡ ಕೆಲವೊಂದು ರಾಜ್ಯಗಳಲ್ಲಿವೆ.

-masthmagaa.com

Contact Us for Advertisement

Leave a Reply