ಸಂಸತ್​​ನಲ್ಲಿ ಕೊರೋನಾ ಮಾತಿಗೆ 1 ನಿಮಿಷ ಬೇಡಿದ್ದರು.. ಈಗ ಅವರೇ ಇಲ್ಲ!

masthmagaa.com:

ತಮಿಳುನಾಡು: ನಿನ್ನೆ ಕೊರೋನಾಗೆ ಬಲಿಯಾದ ತಮಿಳುನಾಡಿನ ಕನ್ಯಾಕುಮಾರಿ ಸಂಸದ ಹೆಚ್​​.ವಸಂತ್ ಕುಮಾರ್ ಸಂಸತ್​ನಲ್ಲಿ ಮಾತನಾಡಿದ್ದ ವಿಡಿಯೋವೊಂದು ವೈರಲ್ ಆಗ್ತಿದೆ. ಲೋಕಸಭೆಯಲ್ಲಿ ಮಾರ್ಚ್ 20ರಂದು ಮಾತನಾಡಿದ್ದ ಅವರು, ಕೊರೋನಾ ವೈರಸ್ ಗಂಭೀರತೆಯ ಬಗ್ಗೆ ಸರ್ಕಾರವನ್ನು ಎಚ್ಚರಿಸಿದ್ರು. ಅಲ್ಲದೆ ಕೊರೋನಾ ಎದುರಿಸಲು ಸರ್ಕಾರ ತೆಗೆದುಕೊಳ್ಳಬೇಕಾದ ಒಂದಷ್ಟು ಹೆಜ್ಜೆಗಳ ಬಗ್ಗೆ ಸಲಹೆ ನೀಡಿದ್ದರು. ದೇಶದಾದ್ಯಂತ ರಾಷ್ಟ್ರೀಯ ವಿಪತ್ತು ಘೋಷಿಸಬೇಕು. ಇದ್ರಿಂದ ಸಾಲ ಮರುಪಾವತಿ ಮಾಡುವವರಿಗೆ ತುಂಬಾ ಕಷ್ಟವಾಗುತ್ತೆ. ಹೀಗಾಗಿ ಸಾಲ ಮರುಪಾವತಿಯ ಅವಧಿಯನ್ನು 3-4 ತಿಂಗಳು ಮುಂದೂಡಬೇಕು. ಕೂಲಿ ಕಾರ್ಮಿಕರ ಕುಟುಂಬಗಳಿಗೆ ಕನಿಷ್ಠ 2 ಸಾವಿರ ರೂಪಾಯಿ ಸಹಾಯ ಧನ ನೀಡಬೇಕು ಹೇಳಿದ್ರು. ನಂತರ ಅವರು ಮಾತು ಮುಂದುವರಿಸಿದಾಗ ಟಿಎಂಸಿ ನಾಯಕ ಸೌಗತಾ ರಾಯ್​​​​ಗೆ ಮಾತನಾಡಲು ಅವಕಾಶ ನೀಡಿದ ಸ್ಪೀಕರ್ ಓಂ ಬಿರ್ಲಾ, ವಸಂತ್ ಕುಮಾರ್ ಅವರ ಮೈಕ್ ಆಫ್ ಮಾಡಿಸಿದ್ದರು. ವಸಂತ್ ಕುಮಾರ್ ಕೊನೆಯವರೆಗೂ 1 ನಿಮಿಷ ಮಾತನಾಡಲು ಅವಕಾಶ ನೀಡಿ ಎಂದು ಮನವಿ ಮಾಡುತ್ತಲೇ ಇದ್ದರು.. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಗಳು ಶುರುವಾಗಿವೆ.

-masthmagaa.com

Contact Us for Advertisement

Leave a Reply