ತಮಿಳುನಾಡು ಚಿನ್ನಮ್ಮ ಬಿಡುಗಡೆಗೆ ಸಿದ್ಧತೆ..! ಕುಟುಂಬದಿಂದ ದಂಡ ಪಾವತಿ

masthmagaa.com:

ಚೆನ್ನೈ: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಎಐಎಡಿಎಂಕೆಯ ಮಾಜಿ ನಾಯಕಿ ವಿ.ಕೆ. ಶಶಿಕಲಾ ಅವರಿಗೆ ನ್ಯಾಯಾಲಯವು ವಿಧಿಸಿದ್ದ 10 ಕೋಟಿ ದಂಡವನ್ನ 4 ಡಿಡಿಗಳ ಮುಖಾಂತರ ಅವರ ಸಂಬಂಧಿಕರು ಜಮೆ ಮಾಡಿದ್ದಾರೆ. ಈ ಮೂಲಕ ಅವರನ್ನು ಜೈಲಿನಿಂದ ಬಿಡುಗಡೆಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ.

‘ನ್ಯಾಯಾಲಯ ವಿಧಿಸಿರುವ ದಂಡವನ್ನು ಪಾವತಿಸಿದ್ರೆ, 2021ರ ಜನವರಿ 27ರಂದು ಶಶಿಕಲಾರನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ’ ಅಂತ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಯೊಂದಕ್ಕೆ ಉತ್ತರಿಸುತ್ತಾ ಜೈಲು ಆಡಳಿತವು ಅಕ್ಟೋಬರ್‌ನಲ್ಲಿ ತಿಳಿಸಿತ್ತು. ‘ದಂಡವನ್ನು ನ್ಯಾಯಾಲಯವು ಸ್ವೀಕರಿಸಿದೆ. ಆ ಬಗ್ಗೆ ಜೈಲು ಆಡಳಿತಕ್ಕೆ ಅಧಿಕೃತ ಮಾಹಿತಿಯನ್ನೂ ನೀಡಲಾಗಿದೆ. ಆದ್ದರಿಂದ 2021ರಲ್ಲಿ ಶಶಿಕಲಾ ಬಿಡುಗಡೆಯಾಗುವುದು ಖಚಿತ’ ಅಂತ ಅವರ ವಕೀಲ ಎನ್‌. ರಾಜಸೆಂತೂರ್‌ ಪಾಂಡ್ಯನ್‌ ಹೇಳಿದ್ದಾರೆ.

ಶಶಿಕಲಾ 2017ರ ಫೆ.15ರಿಂದ ಪರಪ್ಪನ ಅಗ್ರಹಾರದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.

-masthmagaa.com

Contact Us for Advertisement

Leave a Reply