ಪ್ರತಿಮೆ ನಿರ್ಮಾಣದಲ್ಲೂ ಭ್ರಷ್ಟಾಚಾರ: ಡಿಕೆ ಶಿವಕುಮಾರ್

masthmagaa.com:

ನಾಡಪ್ರಭು ಕೆಂಪೇಗೌಡರ ಪ್ರತಿಮೆ ಉದ್ಘಾಟನೆ ಬೆನ್ನಲ್ಲೇ ಪ್ರತಿಮೆ ವಿಷಯ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ನಿನ್ನೆ ಆಮಂತ್ರಣ ವಿಚಾರವಾಗಿ ಚರ್ಚೆ ನಡೆದಿದ್ವು. ಬಿಜೆಪಿ, ಜೆಡಿಎಸ್‌ ಮುಖ್ಯಸ್ಥ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಅವ್ರನ್ನ ಆಮಂತ್ರಿಸಿಲ್ಲ ಅಂತ ಆರೋಪಿಸಿತ್ತು. ಇದೀಗ ಪ್ರತಿಮೆ ನಿರ್ಮಾಣ ಕಾರ್ಯದಲ್ಲೂ ಸರ್ಕಾರ ಹಣ ಲೂಟಿ ಮಾಡಿದೆ ಅಂತ ಕಾಂಗ್ರೆಸ್‌ ನಾಯಕ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ಸರ್ಕಾರ ಹೇಳಿದ್ರೆ ವಿಮಾನ ನಿಲ್ದಾಣದವರೇ ಪ್ರತಿಮೆ ನಿರ್ಮಾಣ ಮಾಡುತ್ತಿದ್ದರು. ಕಮಿಶನ್ ಹೊಡೆಯೋದಕ್ಕೇ ಸರ್ಕಾರ ನಿರ್ಮಾಣ ಮಾಡಿದೆ. ಪಕ್ಷದ ಅಜೆಂಡಾದ ಹಿನ್ನೆಲೆಯಲ್ಲಿ ವೋಟಿಗಾಗಿ ಏನು ಬೇಕು ಅದನ್ನ ಮಾಡ್ತಿದ್ದಾರೆ ಅಂತ ಹೇಳಿದ್ದಾರೆ. ಜೊತೆಗೆ ಮೋದಿ ರಾಜ್ಯಕ್ಕೆ ಯಾವುದಾದ್ರೂ ಯೋಜನೆ ಘೋಷಿಸಬಹುದು ಅನ್ನೊ ನಿರೀಕ್ಷೆಯಿತ್ತು. ಆದ್ರೆ ಮೋದಿ ಕೊಡುಗೆ ಹೂವಿನ ಹಾರ, ನಮಸ್ಕಾರ ಮಾತ್ರ. ಕೋಟಿ ಕೋಟಿ ನಮಸ್ಕಾರ ಅಂದಿದ್ದೇ ಪ್ರಧಾನಿ ಕೊಡುಗೆ ಅಂತ ಲೇವಡಿ ಮಾಡಿದ್ದಾರೆ. ಇನ್ನು ಕೆಂಪೇಗೌಡರ ಪ್ರಗತಿ ಪ್ರತಿಮೆ ಉದ್ಘಾಟನೆಗೆ ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ ಅವ್ರನ್ನ ಆಹ್ವಾನಿಸಿಲ್ಲ ಅಂತ ನೆನ್ನೆ ಜೆಡಿಎಸ್‌ ಆರೋಪಿಸಿತ್ತು. ಇದಕ್ಕೆ ತಿರುಗೇಟು ನೀಡಿರೋ ಬಿಜೆಪಿ ದೇವೇಗೌಡರಿಗೆ ಆಹ್ವಾನ ಕೊಟ್ಟಿರೋದಕ್ಕೆ ಸಾಕ್ಷಿ ಬಿಡುಗಡೆ ಮಾಡಿದೆ. ಪ್ರಧಾನಿಯಾಗಿದ್ದ ಏಕೈಕ ಕನ್ನಡಿಗ ದೇವೇಗೌಡರಿಗೆ ಮೊದಲ ಆಹ್ವಾನ ಪತ್ರ ಹೋಗಿದ್ದು ಮಾತ್ರವಲ್ಲ, ಖುದ್ದು ಬಸವರಾಜ ಬೊಮ್ಮಾಯಿ ಅವ್ರೇ ಕಾಲ್‌ ಮಾಡಿ ಕರೆದಿದ್ದಾರೆ. ಈ ವಿಷಯದಲ್ಲೂ ಸುಳ್ಳು ಹೇಳೋ ಜೆಡಿಎಸ್‌ ತನ್ನ ಸಮಯಸಾಧಕ ಬುದ್ಧಿ ತೋರಿಸ್ತಿದೆ ಅಂತ ಬಿಜೆಪಿ ತಿರುಗೇಟು ಕೊಟ್ಟಿದೆ.

-masthmagaa.com

Contact Us for Advertisement

Leave a Reply