ಕೊರೋನಾಗೆ ಸತ್ತವರ ಬಗ್ಗೆ ಹೊಸ ಲೆಕ್ಕ ಕೊಟ್ಟ ಚೀನಾ..!

masthmagaa.com:

ಕೊರೋನಾ ವೈರಸ್ ಚೀನಾದಲ್ಲಿ ಸೃಷ್ಟಿಸಿದ ಹಾವಳಿ ಬಗ್ಗೆ ಅಮೆರಿಕ ಸೇರಿದಂತೆ ಇಡೀ ವಿಶ್ವ ಸಮುದಾಯಕ್ಕೆ ಅನುಮಾನ. ಸೋಂಕಿತರ ಬಗ್ಗೆ, ಸಾವಿನ ಸಂಖ್ಯೆ ಬಗ್ಗೆ ಚೀನಾ ಸುಳ್ಳು ಮಾಹಿತಿ ನೀಡುತ್ತಿದೆ ಅನ್ನೋ ಆರೋಪ.. ಇದರ ನಡುವೆಯೇ ಕೊರೋನಾ ವೈರಸ್ ಮೊದಲು ಕಾಣಿಸಿಕೊಂಡ  ವುಹಾನ್​ನಲ್ಲಿನ ಸೋಂಕಿತರು ಹಾಗೂ ಮೃತಪಟ್ಟವರ ಸಂಖ್ಯೆಯನ್ನ ಚೀನಾ ಸರ್ಕಾರ ಪರಿಷ್ಕರಿಸಿದೆ.

ಪರಿಷ್ಕೃತ ಲೆಕ್ಕದ ಪ್ರಕಾರ ವುಹಾನ್​ನಲ್ಲಿ ಕೊರೋನಾ ಸೋಂಕಿಗೆ ಮೃತಪಟ್ಟವರ ಸಂಖ್ಯೆಯಲ್ಲಿ 1,290 ಏರಿಕೆಯಾಗಿದೆ. ಈ ಮೂಲಕ ವುಹಾನ್​ನಲ್ಲಿ ಒಟ್ಟು 3,869 ಜನ ಬಲಿಯಾದಂತಾಗಿದೆ. ಅದೇ ರೀತಿ ಸೋಂಕಿತರ ಸಂಖ್ಯೆ 325ರಷ್ಟು ಏರಿಕೆಯಾಗಿದೆ. ಈ ಮೂಲಕ ವುಹಾನ್​ನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 50,333ಕ್ಕೆ ಏರಿಕೆಯಾಗಿದೆ. ಹೊಸದಾಗಿ ಸೇರ್ಪಡೆಯಾದ ಪ್ರಕರಣಗಳು ಆಸ್ಪತ್ರೆಯ ಹೊರಗೆಯಾದ ಸಾವು ಹಾಗೂ ಕಾಯಿಲೆಗಳು. ಅಂಕಿ ಸಂಖ್ಯೆ ಬಗ್ಗೆ ಯಾರೂ ಸುಳ್ಳು ಮಾಹಿತಿ ನೀಡ್ತಿಲ್ಲ ಅಂತ ಚೀನಾ ಸರ್ಕಾರ ಹೇಳಿದೆ.

ಈ ಮೂಲಕ ಚೀನಾದಲ್ಲಿ ಒಟ್ಟು 82,692 ಪ್ರಕರಣಗಳು ದೃಢಪಟ್ಟಂತಾಗಿದ್ದು, ಸಾವಿನ ಸಂಖ್ಯೆ 4,632ಕ್ಕೆ ಏರಿಕೆಯಾಗಿದೆ. ಅಲ್ಲದೆ ರೋಗ ಲಕ್ಷಣ ಕಾಣಿಸದ 1038 ಜನರನ್ನು ತೀವ್ರ ನಿಗಾದಲ್ಲಿ ಇಡಲಾಗಿದೆ.

-masthmagaa.com

Contact Us for Advertisement

Leave a Reply