masthmagaa.com:

ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ಡಿಸೆಂಬರ್ 5ರಂದು, ಅಂದ್ರೆ ನಾಳೆ ಕರ್ನಾಟಕ ಬಂದ್​ಗೆ ಕನ್ನಡಪರ ಸಂಘಟನೆಗಳು ಕರೆ ನೀಡಿವೆ. ಆದ್ರೆ ಬೆಂಗಳೂರಿಗರಿಗೆ ಬಂದ್ ಬಗ್ಗೆ ಭಯ ಬೇಡ. ನಾಳೆ ಬೆಂಗಳೂರಿನಲ್ಲಿ ರ್ಯಾಲಿ ನಡೆಸೋಕೆ ಯಾರೂ ಅನುಮತಿ ಕೇಳಿಲ್ಲ. ನಾವು ಕೂಡ ಯಾರಿಗೂ ಪರ್ಮಿಷನ್ ಕೊಟ್ಟಿಲ್ಲ ಅಂತ ನಗರ ಪೊಲೀಸ್ ಆಯುಕ್ತ ಕಮಲ್​ ಪಂತ್ ಹೇಳಿದ್ದಾರೆ.

ಯಾವುದೇ ಅಹಿತಕರ ಘಟನೆ ನಡೆಯಬಾರದು ಅಂತ ಸಾಕಷ್ಟು ಭದ್ರತಾ ಸಿಬ್ಬಂದಿಯನ್ನ ನಿಯೋಜಿಸಿದ್ದೇವೆ. 12 ಡಿಸಿಪಿ, ಎಲ್ಲಾ ಎಸಿಪಿ, ಇನ್ಸ್​ಪೆಕ್ಟರ್​ ಮತ್ತು ಸಿಬ್ಬಂದಿ ಬೆಳಗ್ಗೆಯಿಂದಲೇ ಕಾರ್ಯನಿರ್ವಹಿಸುತ್ತಾರೆ. 33 ಕೆಎಸ್​ಆರ್​ಪಿ ತುಕಡಿಗಳನ್ನ ನಿಯೋಜಿಸಲಾಗುತ್ತೆ. ಯಾರು ಕೂಡ ಕಾನೂನು ಸುವ್ಯವಸ್ಥೆಗೆ ಅಡ್ಡಿಪಡಿಸಲು ಮುಂದಾಗಬಾರ್ದು. ಬಲವಂತವಾಗಿ ಬಂದ್ ಮಾಡಿಸಬಾರ್ದು. ಕೊರೋನಾ ನಿಯಮಗಳು ಈಗಾಗಲೇ ಜಾರಿಯಲ್ಲಿರೋದ್ರಿಂದ ಯಾರಾದ್ರೂ ನಿಯಮ ಉಲ್ಲಂಘಿಸಿದ್ರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಅಂತ ಕಮಲ್ ಪಂತ್ ಹೇಳಿದ್ದಾರೆ.

ಮತ್ತೊಂದುಕಡೆ ಸಿಎಂ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ‘ವಾಟಾಳ್ ನಾಗರಾಜ್ ಸೇರಿದಂತೆ ಎಲ್ಲರೂ ಸಹ ಬಂದ್ ಮಾಡಿ ಜನರಿಗೆ ತೊಂದರೆ ಕೊಡಬಾರ್ದು. ಎಲ್ಲಾ ಸಮುದಾಯದವರನ್ನ ಒಟ್ಟಾಗಿ ತೆಗೆದುಕೊಂಡು ಹೋಗಲು ನಾನು ಪ್ರಯತ್ನ ಮಾಡ್ತಿದ್ದೀನಿ. ಕನ್ನಡದ ಅಭಿವೃದ್ಧಿಗೆ ಏನೇನು ಆದ್ಯತೆ ಕೊಡಬೇಕೋ ಎಲ್ಲವನ್ನ ಕೊಟ್ಟಿದ್ದೀವಿ. ಇನ್ನೂ ಏನೆಲ್ಲಾ ಮಾಡಬೇಕು ಎಲ್ಲವನ್ನ ಮಾಡಲು ಸಿದ್ಧ. ಹೀಗಾಗಿ ಬಂದ್​ಗೆ ಅವಕಾಶ ಕೊಡ್ಬೇಡಿ’ ಅಂತ ಮನವಿ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply