ಕರ್ನಾಟಕ ಸೇರಿ 6 ರಾಜ್ಯಗಳಲ್ಲಿ ಕೊರೋನಾ ಏರಿಕೆ! ಕೇಂದ್ರದ ವಾರ್ನಿಂಗ್!

masthmagaa.com:

ಮಹಾರಾಷ್ಟ್ರ, ಕೇರಳ, ಪಂಜಾಬ್, ತಮಿಳುನಾಡು, ಗುಜರಾತ್ ಮತ್ತು ಕರ್ನಾಟಕದಲ್ಲಿ ಕೊರೋನಾ ಡೈಲಿ ಕೇಸಸ್ ಜಾಸ್ತಿಯಾಗ್ತಿದೆ ಅಂತ ಕೇಂದ್ರ ಸರ್ಕಾರ ಎಚ್ಚರಿಸಿದೆ. ಕಳೆದ 24 ಗಂಟೆಗಳಲ್ಲಿ ದೃಢಪಟ್ಟ ಒಟ್ಟು ಪ್ರಕರಣಗಳಲ್ಲಿ 85 ಪರ್ಸೆಂಟ್​ನಷ್ಟು ಪ್ರಕರಣ ಈ 6 ರಾಜ್ಯಗಳಿಗೇ ಸೇರಿದೆ. ದೇಶದಲ್ಲಿ ಒಟ್ಟು 17,407 ಪ್ರಕರಣ ದೃಢಪಟ್ಟಿತ್ತು. ಅದ್ರಲ್ಲಿ ಮಹಾರಾಷ್ಟ್ರದ್ದೇ 9,855.. ಕೇರಳದ್ದು 2,765, ಪಂಜಾಬ್​ದು 778, ಕರ್ನಾಟಕದ್ದು 528, ತಮಿಳುನಾಡಿಂದು 489, ಗುಜರಾತ್​ದು 475.. ಮತ್ತೊಂದುಕಡೆ ದೇಶದಲ್ಲಿ ಬ್ರಿಟನ್​, ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್ ರೂಪಾಂತರಿ ವೈರಸ್ ದೃಢಪಟ್ಟ ಪ್ರಕರಣಗಳ ಸಂಖ್ಯೆ 242ಕ್ಕೆ ಏರಿಕೆಯಾಗಿದೆ ಅಂತ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

-masthmagaa.com

Contact Us for Advertisement

Leave a Reply