masthmagaa.com:

ಭಾರತದಿಂದ ಕೆನಾಡಕ್ಕೆ 107 ವರ್ಷಗಳ ಹಿಂದೆ ಕಳ್ಳಸಾಗಣೆ ಮಾಡಿದ್ದ ಅನ್ನಪೂರ್ಣ ದೇವಿಯ ಮೂರ್ತಿಯನ್ನ ಭಾರತಕ್ಕೆ ವಾಪಸ್ ತರಲಾಗುತ್ತಿದೆ ಅಂತ ಪ್ರಧಾನಿ ಮೋದಿ ಹೇಳಿದ್ದಾರೆ. ಮನ್​ ಕಿ ಬಾತ್​ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ, ‘ಈ ಮೂರ್ತಿಯನ್ನ 1913ರಲ್ಲಿ ವಾರಣಾಸಿಯ ದೇವಸ್ಥಾನವೊಂದರಿಂದ ಕಳ್ಳತನ ಮಾಡಲಾಗಿತ್ತು. ಬಳಿಕ ಅದನ್ನ ಹೊರ ದೇಶಕ್ಕೆ ಕಳ್ಳಸಾಗಣೆ ಮಾಡಲಾಗಿತ್ತು. ಅದನ್ನೀಗ ಕೆನಡಾದಿಂದ ಭಾರತಕ್ಕೆ ವಾಪಸ್ ತರುವ ಪ್ರಕ್ರಿಯೆ ನಡೀತಿದೆ’ ಹೇಳಿದ್ರು.

ಇನ್ನು ನೂತನ ಕೃಷಿ ಕಾಯ್ದೆಗಳ ಬಗ್ಗೆ ಮಾತನಾಡಿದ ಪ್ರಧಾನಿ, ‘ಈ ಕಾಯ್ದೆಗಳು ರೈತರಿಗೆ ಹೊಸ ಹಕ್ಕು ಮತ್ತು ಅವಕಾಶಗಳನ್ನ ನೀಡಿದೆ. ಕೊರೋನಾ ವೈರಸ್​​ ಸಾಂಕ್ರಾಮಿಕ ಕಾಲದಲ್ಲಿ ಸಿಖ್ ಸಮುದಾಯವು ಜನರಿಗೆ ಆಹಾರ ನೀಡುವ ಸಂಪ್ರದಾಯವನ್ನು ಹೇಗೆ ಮುಂದುವರಿಸಿದೆ ಅನ್ನೋದನ್ನ ನಾವು ನೋಡಿದ್ದೇವೆ’ ಅಂತ ಹೇಳಿದ್ರು. ಪಂಜಾಬ್, ಹರಿಯಾಣ, ದೆಹಲಿಯಲ್ಲಿ ರೈತರು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲೇ ಪ್ರಧಾನಿ ಮೋದಿ ಈ ರೀತಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply