ಇಂಡೋ-ಆಸೀಸ್ ಟೆಸ್ಟ್​​..ಇತಿಹಾಸದಲ್ಲೇ ಕಡಿಮೆ ರನ್! 36ಕ್ಕೆ ಕೊಹ್ಲಿ ಪಡೆ ಆಲೌಟ್​​​!

masthmagaa.com:

ಆಸ್ಟ್ರೇಲಿಯಾ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಅಡಿಲೇಡ್​​ನಲ್ಲಿ ನಡೆಯುತ್ತಿರುವ ಮೊದಲ ಡೇ-ನೈಟ್​ ಟೆಸ್ಟ್ ಪಂದ್ಯ ರೋಚಕ ಗಟ್ಟ ತಲುಪಿದೆ. ಭಾರತ ಇತಿಹಾಸದಲ್ಲೇ ಮೊದಲ ಬಾರಿಗೆ ಅವಮಾನಕರ ಮೊತ್ತಕ್ಕೆ ಆಲ್​​ಔಟ್​​ ಆಗಿದೆ. 2ನೇ ದಿನದಂತ್ಯಕ್ಕೆ ಎರಡನೇ ಇನ್ನಿಂಗ್ಸ್ ಆರಂಭಿಸಿ 1 ವಿಕೆಟ್​​​​ ನಷ್ಟಕ್ಕೆ 9 ರನ್ ಗಳಿಸಿದ್ದ ಭಾರತ, 3ನೇ ದಿನದ ಆರಂಭದಲ್ಲಿ 36 ರನ್​​ಗಳಿಗೆ ಆಲೌಟ್ ಆಗಿದೆ. ಭಾರತದ ಪರ ಒಬ್ಬ ಆಟಗಾರನೂ ಎರಡಂಕಿ ದಾಟದೇ ಔಟಾಗಿ ಪೆವಿಲಿಯನ್ ಸೇರಿದ್ದಾರೆ. ಮೊದಲ ಇನ್ನಿಂಗ್ಸ್​​​ನಲ್ಲಿ ಭಾರತ 244 ರನ್​ಗಳಿಗೆ ಆಲೌಟ್ ಆಗಿತ್ತು. ನಂತರ ಬ್ಯಾಟಿಂಗ್​ ಮಾಡಿದ ಆಸ್ಟ್ರೇಲಿಯಾ 191 ರನ್​ಗೆ ಆಲೌಟ್​ ಆಯ್ತು. 53 ರನ್ ಮುನ್ನಡೆ ಪಡೆದು ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ 36 ರನ್​​​​​​ಗೆ ಆಲೌಟ್ ಆಗಿ, ಆಸ್ಟ್ರೇಲಿಯಾಗೆ 90 ರನ್ ಟಾರ್ಗೆಟ್ ನೀಡಿದೆ. ಇತ್ತೀಚಿನ ವರದಿ ಬಂದಾಗ ಆಸ್ಟ್ರೇಲಿಯಾ ವಿಕೆಟ್ ನಷ್ಟವಿಲ್ಲದೇ 15 ರನ್ ಗಳಿಸಿದೆ.

-masthmagaa.com

Contact Us for Advertisement

Leave a Reply