masthmagaa.com:

ದೆಹಲಿ: ಭಾರತದಲ್ಲಿ ನಿನ್ನೆಯಷ್ಟೇ ಡಿಸಿಜಿಐನಿಂದ ಗ್ರೀನ್ ಸಿಗ್ನಲ್ ಪಡೆದಿರುವ ಭಾರತ್ ಬಯೋಟೆಕ್​​ನ ಕೋವ್ಯಾಕ್ಸಿನ್ ಲಸಿಕೆಯನ್ನು 12 ವರ್ಷಕ್ಕಿಂತ ದೊಡ್ಡವರ ಮೇಲೆ ಪ್ರಯೋಗಕ್ಕೆ ಡ್ರಗ್ಸ್​ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅಸ್ತು ಎಂದಿದೆ. ಕೋವ್ಯಾಕ್ಸಿನ್ ಉತ್ಪಾದನೆ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಭಾರತ್​​ ಬಯೋಟೆಕ್​​​​​ಗೆ ಡಿಸಿಜಿಐ ಒಂದು ಲೈಸೆನ್ಸ್ ನೀಡಿದೆ. ಅದರಲ್ಲಿ 12 ವರ್ಷ ಮೇಲ್ಪಟ್ಟ ಮಕ್ಕಳಿಗೂ ಲಸಿಕೆ ನೀಡಬಹುದು ಅಂತ ಹೇಳಿದೆ.

ಭಾರತ್ ಬಯೋಟೆಕ್ ಸಂಸ್ಥೆ 2ನೇ ಹಂತದಲ್ಲೂ 12 ವರ್ಷ ಮೇಲ್ಪಟ್ಟ ಮಕ್ಕಳ ಮೇಲೆ ಲಸಿಕೆ ಪ್ರಯೋಗಿಸಿತ್ತು. ಇದು ಮಕ್ಕಳಿಗೂ ಸೇಫ್ ಅನ್ನೋದು 3ನೇ ಹಂತದ ಪ್ರಯೋಗದಲ್ಲೂ ದೃಢಪಟ್ಟರೆ 12 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನ ಮಕ್ಕಳಿಗೂ ನೀಡಲಾಗುತ್ತೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಈ ನಡುವೆ ಕೋವ್ಯಾಕ್ಸಿನ್ ಲಸಿಕೆಯನ್ನು ಕ್ಲಿನಿಕಲ್ ಟ್ರಯಲ್ ಮೋಡ್​​ನಲ್ಲೇ ಬಳಸಲಾಗುತ್ತೆ. ಈ ಲಸಿಕೆ ಹಾಕಿಸಿಕೊಂಡವರನ್ನು ಗುರುತಿಸಿ ಅವರ ಮೇಲೆ ನಿಗಾ ಇಡಲಾಗುತ್ತೆ ಅಂತ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply