masthmagaa.com:

ರಾಜ್ಯದಲ್ಲಿ ಮರಾಠ ಪ್ರಾಧಿಕಾರ ರಚನೆ ವಿಚಾರ ಈಗ ಬಂದ್ ತನಕ ಬಂದಿದೆ. ಸರ್ಕಾರದ ನಡೆಯನ್ನ ವಿರೋಧಿಸಿ ಕನ್ನಡಪರ ಸಂಘಟನೆಗಳು ಡಿಸೆಂಬರ್ 5ಕ್ಕೆ ಕರ್ನಾಟಕ ಬಂದ್​ಗೆ ಕರೆ ನೀಡಿವೆ. ಆದ್ರೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಭರದಲ್ಲಿ ಸಿಎಂ ಬಿ.ಎಸ್​. ಯಡಿಯೂರಪ್ಪ ಕುರಿತು ವಾಟಾಳ್ ನಾಗರಾಜ್ ಆಡಿದ ಮಾತುಗಳು ಈಗ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ಕಣ್ಣು ಕೆಂಪಗಾಗಿಸಿದೆ. ಈ ಸಂಬಂಧ ಅವರು ವಾಟಾಳ್ ನಾಗರಾಜ್​ಗೆ ಬಹಿರಂಗ ಎಚ್ಚರಿಕೆ ಕೊಟ್ಟಿದ್ದಾರೆ. ‘ಕನ್ನಡದ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬದ್ಧತೆಯನ್ನ ಪ್ರಶ್ನಿಸುವ ನೈತಿಕತೆ ಯಾರಿಗೂ ಇಲ್ಲ. ವಾಟಾಳ್ ನಾಗರಾಜ್ ಬಳಸಿರುವ ಭಾಷೆ ಎಂಥಾದ್ದು. ಮುಖ್ಯಮಂತ್ರಿಗಳ ಬಗ್ಗೆ ಹೀಗೆ ಮಾತನಾಡಿದ್ರೆ ಸರಿ ಇರಲ್ಲ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗುವಂತೆ ಮಾಡಿದ್ದರು ಸಿಎಂ ಬಿಎಸ್​ವೈ. ಇಂತಹ ಸಿಎಂ ಬಗ್ಗೆ ವಾಟಾಳ್ ನಾಗರಾಜ್ ಬಳಸಿದ ಭಾಷೆ ಸರಿ ಇಲ್ಲ. ಅವರು ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ನನ್ನ ಭಾಷೆಯಲ್ಲೇ ಅವರಿಗೆ ಉತ್ತರ ಕೊಡುತ್ತೇನೆ. ವಾಟಾಳ್ ನಾಗರಾಜ್​ಗೆ ನಾಲಗೆ ಮೇಲೆ ಹಿಡಿತವಿರಲಿ. ಕನ್ನಡ ಭಾಷೆ ಬಗ್ಗೆ ಅವರಿಗೆ ಮಾತ್ರ ಅಭಿಮಾನವಿರುವುದಾ, ನಾವೆಲ್ಲಾ ಕನ್ನಡಿಗರಲ್ವಾ.. ನಾವೂ ಸಹ ಅಚ್ಚ ಕನ್ನಡಿಗರು’ ಅಂತ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply