masthmagaa.com:

ಬೆಂಗಳೂರು: ಡ್ರಗ್ಸ್​ ದಂಧೆಯಲ್ಲಿ ಕನ್ನಡದ ಖ್ಯಾತ ನಟ ನಟಿಯರು, ಸಂಗೀತಗಾರರು ಭಾಗಿಯಾಗಿದ್ದಾರೆ ಅಂತ ನಾರ್ಕೊಟಿಕ್ಸ್​ ಕಂಟ್ರೋಲ್ ಬ್ಯುರೋ (NCB) ಹೇಳಿರುವ ಬೆನ್ನಲ್ಲೇ ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರ ಮಾದಕವಸ್ತು  ನಿಗ್ರಹ ದಳ ಭರ್ಜರಿ ಬೇಟೆಯಾಡಿದೆ. ಸಿಸಿಬಿ ಕಾರ್ಯಾಚರಣೆ ವೇಳೆ ಬರೋಬ್ಬರಿ 204 ಕೆ.ಜಿಯಷ್ಟು ಗಾಂಜಾವನ್ನು ವಶಪಡಿಸಿಕೊಂಡಿದ್ದು, ಮೂವರು ಅಂತಾರಾಜ್ಯ ಡ್ರಗ್​ ಪೆಡ್ಲರ್​ಗಳನ್ನ ಅರೆಸ್ಟ್ ಮಾಡಲಾಗಿದೆ.

ಭಾರಿ ಪ್ರಮಾಣದ ಈ ಗಾಂಜಾವನ್ನು ಬೆಂಗಳೂರು ನಗರ ಮತ್ತು ಹೊರವಲಯ, ರಾಮನಗರ, ಮೈಸೂರು, ಚಿಕ್ಕಬಳ್ಳಾಪುರ ಮುಂತಾದಕಡೆ ಪೂರೈಸಲು ಆರೋಪಿಗಳು ಪ್ಲಾನ್ ಮಾಡಿದ್ದರು ಅಂತ ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್ ಹೇಳಿದ್ದಾರೆ. ಜೊತೆಗೆ ಗಾಂಜಾ ಕಳ್ಳಸಾಗಣೆಯ ಜಾಲವನ್ನು ಶೀಘ್ರದಲ್ಲೇ ಪತ್ತೆಹಚ್ಚುತ್ತೇವೆ ಎಂದಿದ್ದಾರೆ.

-masthmagaa.com

Contact Us for Advertisement

Leave a Reply