masthmagaa.com:

ತೆಲುಗು ಸಿನಿಮಾ ನಟ ಚಿರಂಜೀವಿಗೂ ಕೊರೋನಾ ಸೋಂಕು ದೃಢಪಟ್ಟಿದೆ. ‘ಆಚಾರ್ಯ’ ಸಿನಿಮಾದ ಶೂಟಿಂಗ್ ಸೆಟ್​ಗೆ ತೆರಳುವ ಮುನ್ನ ಕೊರೋನಾ ಪರೀಕ್ಷೆ ಮಾಡಿಸಿಕೊಂಡಾಗ ಪಾಸಿಟಿವ್ ಬಂದಿದೆ ಅಂತ 65 ವರ್ಷ ವಯಸ್ಸಿನ ಚಿರಂಜೀವಿ ಹೇಳಿದ್ದಾರೆ. ಆದ್ರೆ ಅವರಿಗೆ ರೋಗದ ಲಕ್ಷಣಗಳು ಇಲ್ಲ. ಹೀಗಾಗಿ ಮನೆಯಲ್ಲಿ ಕ್ವಾರಂಟೈನ್​ಗೆ ಒಳಗಾಗಿದ್ದಾರೆ. ಜೊತೆಗೆ ಕಳೆದ 5 ದಿನಗಳಲ್ಲಿ ನನ್ನ ಸಂಪರ್ಕಕ್ಕೆ ಬಂದವರು ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಿ ಅಂತಾನೂ ತಿಳಿಸಿದ್ದಾರೆ. ಅಂದ್ಹಾಗೆ ಎರಡು ದಿನಗಳ ಹಿಂದಷ್ಟೇ ನಟರಾದ ಚಿರಂಜೀವಿ ಮತ್ತು ನಾಗಾರ್ಜುನ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಅವರನ್ನ ಭೇಟಿಯಾಗಿದ್ದರು. ಈ ವೇಳೆ ಇಬ್ಬರು ನಟರು ಸೇರಿದಂತೆ ಕೆಸಿಆರ್ ಕೂಡ ಮಾಸ್ಕ್ ಧರಿಸಿರಲಿಲ್ಲ. ಹೀಗಾಗಿ ಎಲ್ಲರೂ ಕೊರೋನಾ ಪರೀಕ್ಷೆಗೆ ಒಳಪಡುವ ಸಾಧ್ಯತೆ ಇದೆ.

-masthmagaa.com

Contact Us for Advertisement

Leave a Reply