masthmagaa.com:

ಪಾಕಿಸ್ತಾನದಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆ ನಿಧಾನವಾಗಿ ಏಳಲು ಆರಂಭವಾದಂತೆ ಕಾಣ್ತಿದೆ. ಕಳೆದ 24 ಗಂಟೆಗಳಲ್ಲಿ ಪಾಕ್​ನಲ್ಲಿ 2,128 ಜನರಿಗೆ ಹೊಸದಾಗಿ ಕೊರೋನಾ ಸೋಂಕು ದೃಢಪಟ್ಟಿದೆ. ಜುಲೈ ಬಳಿಕ ಒಂದು ದಿನದಲ್ಲಿ ದೃಢಪಟ್ಟ ಅತಿ ಹೆಚ್ಚು ಪ್ರಕರಣ ಇದಾಗಿದೆ. ಇಷ್ಟೇ ಅಲ್ಲ ಸತತ 4 ದಿನಗಳಿಂದ 2,000ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಪಾಕಿಸ್ತಾನದ ಕೊರೋನಾ ಗ್ರಾಫ್ ನೋಡಿದ್ರೆ ಅಲ್ಲಿ ಎರಡನೇ ಅಲೆ ಶುರುವಾಗುವ ಮುನ್ಸೂಚನೆ ಎದ್ದು ಕಾಣುತ್ತೆ.

ಅಂದ್ಹಾಗೆ ಪಾಕ್​ನಲ್ಲಿ ಜೂನ್​ ತಿಂಗಳಿನಲ್ಲಿ ಕೊರೋನಾ ಪೀಕ್ (ಗರಿಷ್ಠ ಮಟ್ಟ) ತಲುಪಿತ್ತು. ಆಗ ಅತಿ ಹೆಚ್ಚು 6,800 ಕೊರೋನಾ ಕೇಸ್ ದೃಢಪಟ್ಟಿತ್ತು. ಬಳಿಕ ಇಳಿಮುಖವಾಗುತ್ತಾ ಬಂದಿದ್ದ ನಂಬರ್ಸ್​ ಆಗಸ್ಟ್​ನಲ್ಲಿ 213ಕ್ಕೆ ಬಂದಿತ್ತು. ಆದ್ರೀಗ ಈ ನಂಬರ್ಸ್ ಮತ್ತೆ ಏರುಮುಖವಾಗಿ ಹೋಗುತ್ತಿದೆ. ಪಾಕ್​ನಲ್ಲಿ ಇದುವರೆಗೆ 3.59 ಲಕ್ಷ ಜನರಿಗೆ ಸೋಂಕು ತಗುಲಿದ್ದು 7,160 ಸೋಂಕಿತರು ಮೃತಪಟ್ಟಿದ್ದಾರೆ. ಹಾಗೇ 3.23 ಲಕ್ಷ ಜನ ಗುಣಮುಖ ಕೂಡ ಆಗಿದ್ದಾರೆ.

-masthmagaa.com

Contact Us for Advertisement

Leave a Reply