masthmagaa.com:

ಐಪಿಎಲ್​ನಲ್ಲಿ ಈ ಬಾರಿ ಚಾಂಪಿಯನ್ಸ್ ಎನಿಸಿಕೊಂಡ ಮುಂಬೈ ಇಂಡಿಯನ್ಸ್ ತಂಡದ ಆಟಗಾರ ಕೃನಾಲ್ ಪಾಂಡ್ಯಾ ಯುಎಇನಿಂದ ಮುಂಬೈ ಏರ್​ಪೋರ್ಟ್​ಗೆ ಆಗಮಿಸುತ್ತಿದ್ದಂತೇ ಅವರಿಗೊಂದು ಶಾಕ್ ಎದುರಾಗಿದೆ. ಅವರನ್ನು ವಿಚಾರಣೆಗಾಗಿ ಡೈರೆಕ್ಟೊರೇಟ್​ ರೆವಿನ್ಯೂ ಇಂಟೆಲಿಜೆನ್ಸ್ (DRI) ಅಧಿಕಾರಿಗಳು ತಡೆದಿದ್ದಾರೆ ಅಂತ ವರದಿಯಾಗಿದೆ. ಇದಕ್ಕೆ ಕಾರಣ ವಿದೇಶದಿಂದ ಬರುವಾಗ ಅವರ ಬಳಿ ಅಘೋಷಿತ ಚಿನ್ನ ಮತ್ತು ಇತರ ಬೆಲೆ ಬಾಳುವ ವಸ್ತುಗಳು ಇತ್ತು ಅನ್ನೋದು. ಈ ಹಿನ್ನೆಲೆ ಅವರನ್ನ ತಡೆದಿರುವ ಅಧಿಕಾರಿಗಳು, ಬೆಲೆ ಬಾಳುವ ವಸ್ತುಗಳಿಗೆ ಸಂಬಂಧಿಸಿದ ದಾಖಲೆಗಳನ್ನ ಕೇಳಿದ್ದಾರೆ.

ಅಂದ್ಹಾಗೆ ನಿಯಮಗಳ ಪ್ರಕಾರ ವಿದೇಶದಲ್ಲಿ ಒಂದು ವರ್ಷಕ್ಕಿಂತ ಹೆಚ್ಚು ಕಾಲ ವಾಸವಿರುವ ಪುರುಷರು ಭಾರತಕ್ಕೆ ಬರುವಾಗ 50,000 ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನ ಮಾತ್ರ ತರಬಹುದು. ಇದಕ್ಕೆ ಯಾವುದೇ ಶುಲ್ಕ ಇರುವುದಿಲ್ಲ. ಮಹಿಳೆಯರಾದ್ರೆ 1 ಲಕ್ಷ ಮೌಲ್ಯದ ಚಿನ್ನಾಭರಣ ತರಬಹುದು. ಆದ್ರೆ ಚಿನ್ನದ ನಾಣ್ಯ ಅಥವಾ ಬಿಸ್ಕೆಟ್​ಗಳಿಗೆ ಶುಲ್ಕ ವಿಧಿಸಲಾಗುತ್ತದೆ. ಕೃನಾಲ್ ಪಾಂಡ್ಯಾ ಬಳಿ ಚಿನ್ನದ 2 ಬ್ರೇಸ್​ಲೆಟ್​, ದುಬಾರಿ ವಾಚ್ ಮತ್ತು ಹಲವು ಬೆಲೆಬಾಳುವ ವಸ್ತುಗಳು ಸಿಕ್ಕಿವೆ ಅಂತ ಮೂಲಗಳು ತಿಳಿಸಿವೆ. ಈ ವಸ್ತುಗಳು ತನ್ನ ಬಳಿ ಇವೆ ಅಂತ ಕೃನಾಲ್ ಪಾಂಡ್ಯಾ ಮೊದಲೇ ಘೋಷಣೆ ಮಾಡಬೇಕಿತ್ತು. ಅದನ್ನ ಅವರು ಮಾಡಿರಲಿಲ್ಲ. ಹೀಗಾಗಿ ಅವರನ್ನ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ವಿದೇಶದಿಂದ ಭಾರತಕ್ಕೆ ಚಿನ್ನ ಕಳ್ಳಸಾಗಣೆಯಾಗ್ತಿರುವ ಹಲವು ಪ್ರಕರಣಗಳು ದಿನನಿತ್ಯ ವರದಿಯಾಗ್ತಿವೆ. ಇಂತಹ ಸಂದರ್ಭದಲ್ಲೇ ಮುಂಬೈ ಇಂಡಿಯನ್ಸ್ ಆಟಗಾರನ ಈ ಪ್ರಕರಣ ಸಾಕಷ್ಟು ಮಹತ್ವ ಪಡೆದುಕೊಂಡಿದೆ.

-masthmagaa.com

Contact Us for Advertisement

Leave a Reply