ಡ್ರಗ್ಸ್‌ ಪ್ರಕರಣ: ಬಾಲಿವುಡ್‌ ಹಾಸ್ಯನಟಿ ಭಾರ್ತಿ ಸಿಂಗ್‌ ಅರೆಸ್ಟ್..

masthmagaa.com:

ಮುಂಬೈ:  ಬಾಲಿವುಡ್‌  ಹಾಸ್ಯನಟಿ ಭಾರ್ತಿ ಸಿಂಗ್  ಮನೆಯಲ್ಲಿ ಮಾದಕ ವಸ್ತು ದೊರೆತ ಹಿನ್ನಲೆಯಲ್ಲಿ ಎನ್‌ಸಿಬಿ ಅಧಿಕಾರಿಗಳು ಅವರನ್ನ ಅರೆಸ್ಟ್‌ ‌ ಮಾಡಿದ್ದಾರೆ.  ಇಂದು ಬೆಳಿಗ್ಗೆ ಎನ್‌ಸಿಬಿ ಅಧಿಕಾರಿಗಳು ಭಾರ್ತಿ ಮನೆ ಮೇಲೆ ದಾಳಿ ನಡೆಸಿದ್ದಾಗ ಸಣ್ಣ ಪ್ರಮಾಣದಲ್ಲಿ ಕೆನಬಿಸ್ ಅನ್ನೋ ಮಾದಕ ವಸ್ತು ಪತ್ತೆಯಾಗಿತ್ತು. ಬಳಿಕ  ಅವರ ಪತಿ  ಹರ್ಷ ಲಿಂಬಾಚಿಯಾ  ಸೇರಿದಂತೆ ಭಾರ್ತಿಯನ್ನ ವಿಚಾರಣೆಗೆ ಕರೆದೊಯ್ದಿದ್ದರು. ಈ ವೇಳೆ ನಟಿ ಭಾರ್ತಿ ಹಾಗೂ ಪತಿ ಇಬ್ಬರೂ ಡ್ರಗ್ಸ್‌ ತೆಗೆದುಕೊಳ್ಳುತ್ತಿರುವ ಬಗ್ಗೆ ತಪ್ಪೊಪ್ಪಿಗೆ ನೀಡಿದ್ದಾರೆ.  ಈ ಹಿನ್ನಲೆಯಲ್ಲಿ ಭಾರ್ತಿಯನ್ನ ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದು, ನಾಳೆ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು ಅಂತ ಅಧಿಕಾರಿಗಳು ತಿಳಿಸಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ಸಂಬಂಧ ಡ್ರಗ್ ಪೆಡ್ಲರ್ ಓರ್ವನ ವಿಚಾರಣೆ ವೇಳೆ ಭಾರ್ತಿ ಸಿಂಗ್ ಹೆಸರು ಕೇಳಿ ಬಂದಿತ್ತು. ಹೀಗಾಗಿ ಇಂದು ಎನ್​ಸಿಬಿ ಅಧಿಕಾರಿಗಳು ಭಾರ್ತಿ ಮನೆ ಮೇಲೆ ದಾಳಿ ನಡೆಸಿದ್ರು. ಇದಲ್ಲದೆ ಮುಂಬೈನ ಮತ್ತೆರಡು ಸ್ಥಳಗಳಲ್ಲೂ ಎನ್​ಸಿಬಿ ಅಧಿಕಾರಿಗಳು ರೇಡ್ ನಡೆಸಿದ್ದಾರೆ.

Contact Us for Advertisement

Leave a Reply