masthmagaa.com:

ಮುಂಬೈ ಷೇರುಪೇಟೆ ಸತತ 7ನೇ ದಿನ ಏರಿಕೆ ಕಂಡು ಸಾರ್ವಕಾಲಿಕ ದಾಖಲೆ ಮೂಲಕ ಈ ವರ್ಷದ ವಹಿವಾಟು ಬಂದ್ ಮಾಡಿದೆ. ಇವತ್ತು ಸಂವೇದಿ ಸೂಚ್ಯಂಕ 5 ಅಂಕಗಳ ಅಲ್ಪ ಏರಿಕೆ ಕಂಡು 47,751ರಲ್ಲಿ ಈ ವರ್ಷದ ಕೊನೇ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 0.20 ಅಂಕ ಏರಿಕೆ ಕಂಡು 13,982 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 24 ಪೈಸೆ ಗಳಿಕೆ ಕಂಡು ₹73.07 (73 ರೂಪಾಯಿ 7 ಪೈಸೆ) ಆಗಿದೆ.

ಚಿನ್ನ ಮತ್ತು ಬೆಳ್ಳಿ ಬೆಲೆ ಇವತ್ತು ಜಾಸ್ತಿಯಾಗಿದೆ. 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 231 ರೂಪಾಯಿ ಜಾಸ್ತಿಯಾಗಿ ₹50,202 ಆಗಿದೆ. 1 ಕೆಜಿ ಬೆಳ್ಳಿ ಬೆಲೆ 287 ರೂಪಾಯಿ ಜಾಸ್ತಿಯಾಗಿ ₹67,383 ಆಗಿದೆ. ಈ ಎಲ್ಲಾ ದರಗಳು 3 ಪರ್ಸೆಂಟ್ ಜಿಎಸ್​ಟಿ ಮತ್ತು ಮೇಕಿಂಗ್ ಚಾರ್ಜಸ್​ ಒಳಗೊಂಡಿರೋದಿಲ್ಲ.

-masthmagaa.com

Contact Us for Advertisement

Leave a Reply