masthmagaa.com:

ಕಳೆದ ಕೆಲ ದಿನಗಳಿಂದ ದಾಖಲೆ ಮೇಲೆ ದಾಖಲೆ ಬರೀತಿರೋ ಮುಂಬೈ ಷೇರುಪೇಟೆ ಇವತ್ತು ಮತ್ತೆ ಸಾರ್ವಕಾಲಿಕ ದಾಖಲೆ ಬರೆದಿದೆ. ಇವತ್ತು 248 ಅಂಕ ಏರಿಕೆ ಕಂಡ ಸಂವೇದಿ ಸೂಚ್ಯಂಕ 49,517ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 79 ಅಂಕ ಏರಿಕೆ ಕಂಡು 14,563 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 15 ಪೈಸೆ ಗಳಿಕೆ ಕಂಡು ₹73.25 (73 ರೂಪಾಯಿ 25 ಪೈಸೆ) ಆಗಿದೆ.

ಇನ್ನು ಚಿನ್ನ ಮತ್ತು ಬೆಳ್ಳಿ ಬೆಲೆ ವಿಚಾರಕ್ಕೆ ಬಂದ್ರೆ, 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 130 ರೂಪಾಯಿ ಜಾಸ್ತಿಯಾಗಿ ₹49,664 ಆಗಿದೆ. 1 ಕೆಜಿ ಬೆಳ್ಳಿ ಬೆಲೆ 551 ರೂಪಾಯಿ ಜಾಸ್ತಿಯಾಗಿ ₹65,564 ಆಗಿದೆ. ಈ ಎಲ್ಲಾ ದರಗಳು 3 ಪರ್ಸೆಂಟ್ ಜಿಎಸ್​ಟಿ ಮತ್ತು ಮೇಕಿಂಗ್ ಚಾರ್ಜಸ್​ ಒಳಗೊಂಡಿರೋದಿಲ್ಲ.

-masthmagaa.com

Contact Us for Advertisement

Leave a Reply