ಕರ್ನಾಟಕ, ಕೇರಳದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ..!

masthmagaa.com:

ರಾಜ್ಯದ ಹಲವೆಡೆ ಈಗಾಗಲೇ ಅಬ್ಬರಿಸುತ್ತಿರುವ ಮಳೆರಾಯ ಇನ್ನೊಂದಿಷ್ಟು ದಿನಗಳ ಕಾಲ ಜೋರಾಗಿ ಆರ್ಭಟಿಸುವ ಸಾಧ್ಯತೆ ಇದೆ. ಈ ಬಗ್ಗೆ ಕೇಂದ್ರ ಭೂವಿಜ್ಞಾನ ಇಲಾಖೆ ಮುನ್ಸೂಚನೆ ನೀಡಿದೆ. ಕರ್ನಾಟಕ ಮತ್ತು ಕೇರಳದ ಹಲವೆಡೆ ಸೆಪ್ಟೆಂಬರ್ 11ರವರೆಗೆ ಭಾರಿ ಮಳೆಯಾಗುವ ಬಗ್ಗೆ ಮುನ್ಸೂಚನೆ ನೀಡಲಾಗಿದೆ.

ಜೊತೆಗೆ ಪುದುಚೆರಿ ಕೇಂದ್ರಾಡಳಿತ ಪ್ರದೇಶದ ಮಾಹೆ ಜಿಲ್ಲೆಯಲ್ಲೂ ಭಾರಿ ಮಳೆಯಾಗಲಿದೆ. ಅಂದ್ಹಾಗೆ ಪುದುಚೆರಿ ಆಡಳಿತಕ್ಕೆ ಒಳಪಟ್ಟಿರುವ ಮಾಹೆ ಜಿಲ್ಲೆಯು ಕೇರಳದ ಕಣ್ಣೂರು ಜಿಲ್ಲೆ ಬಳಿ ಇದೆ.

ಉಳಿದಂತೆ ತಮಿಳುನಾಡು, ಪುದುಚೆರಿ ಮತ್ತು ಕಾರೈಕಲ್​ನಲ್ಲಿ ಸೆಪ್ಟೆಂಬರ್​ 9ರವರೆಗೆ ಭಾರಿ ವರ್ಷಧಾರೆಯಾಗುವ ಸಾಧ್ಯತೆ ಇದೆ. ಮಧ್ಯ ಮತ್ತು ಪೂರ್ವ ಭಾರತದಲ್ಲಿ ಸಾಧಾರಣ ಮಳೆಯಾಗಲಿದೆ ಅಂತ ಕೇಂದ್ರ ಭೂ ವಿಜ್ಞಾನ ಇಲಾಖೆ ತಿಳಿಸಿದೆ.

-masthmagaa.com

Contact Us for Advertisement

Leave a Reply