ನಮ್ಮ ರೂಪಾಯಿ-ಪಾಕಿಸ್ತಾನ್ ರೂಪಾಯಿ! ಭಾರತದ ಕರೆನ್ಸಿಯ ರೋಚಕ ಇತಿಹಾಸ!

masthmagaa.com:

ಪಾಕಿಸ್ತಾನದಲ್ಲಿ ಪೆಟ್ರೋಲ್ ರೇಟು ಭಾರಿ ಜಾಸ್ತಿಯಾಗಿದೆ. ಈ ಸುದ್ದಿ ನೋಡಿದ ಕೂಡಲೇ ನಿಮಗೆ ಒಂದು ರೋಚಕ ಮಾಹಿತಿ ನೀಡಲೇಬೇಕು ಅಂತಾ ನಮಗೆ ಅನಿಸಿತು. ಅದೇ ನಮ್ಮ ಕರೆನ್ಸಿ ರೂಪಾಯಿಯ ಇತಿಹಾಸ ಮತ್ತು ಸೌದಿ ಅರೇಬಿಯಾದಿಂದ – ಆಸ್ಟ್ರೇಲಿಯಾವರೆಗೆ ವ್ಯಾಪಿಸಿರೋ ರೂಪಾಯಿಯ ಹೆಜ್ಜೆಗುರುತನ್ನ ತಿಳಿಸೋಣ ಅಂತಾ ಅನಿಸ್ತು. ಆಚಾರ್ಯ ಚಾಣಕ್ಯ ಹಾಗೂ ಚಂದ್ರಗುಪ್ತ ಮೌರ್ಯನ ಕಾಲದ ‘ರುಪ್ಯಾರೂಪ’ದ ರೋಮಾಂಚಕ ಸಂಗತಿಯನ್ನೂ ನಿಮಗೆ ಹೇಳೋಣ ಅನಿಸಿತು. ಜ್ಞಾನ ಹಂಚೋದೆ ನಿಮ್ಮ ಪ್ರೀತಿಯ masthmagaa.comನ ಸ್ಪೆಷಾಲಿಟಿ. ಅದಕ್ಕೇ ಈ ವರದಿ.

ಸ್ನೇಹಿತರೆ ಪಾಕಿಸ್ತಾನದಲ್ಲಿ ಈಗ ಪೆಟ್ರೋಲ್​​​​ಗೆ 3 ರೂಪಾಯಿ 20 ಪೈಸೆ ಏರಿಕೆಯಾಗಿದ್ದು 109 ರೂಪಾಯಿ 20 ಪೈಸೆ ಆಗಿದೆ. ಮತ್ತು ಡೀಸೆಲ್ ರೇಟು 2 ರೂಪಾಯಿ 95 ಪೈಸೆ ಏರಿಕೆಯಾಗಿ 113 ರೂಪಾಯಿ 19 ಪೈಸೆಯಾಗಿದೆ. ಇದೇ ಟೈಮಲ್ಲಿ ಭಾರತದಲ್ಲಿ ಡೀಸೆಲ್ ರೇಟು 79 ರೂಪಾಯಿ 40 ಪೈಸೆ ಇದ್ದು, ಪೆಟ್ರೋಲ್ ರೇಟು 87 ರೂಪಾಯಿ 57 ಪೈಸೆ ಇದೆ.

ಓ..! ನಮಗಿಂತಾ ಪಾಕಿಸ್ತಾನದಲ್ಲೇ ರೇಟ್ ಜಾಸ್ತಿ ಅಂತಾ ಅನ್ಕೋಬೇಡಿ. ಸೀನ್ ಉಲ್ಟಾ ಇದೆ. ಪಾಕಿಸ್ತಾನದಲ್ಲಿ ಈಗಲೂ ನಮಗಿಂತ ಅರ್ಧಕ್ಕರ್ಧ ಕಮ್ಮಿ ಇದೆ. ಜಾಸ್ತಿ ಅಂತಾ ಕಣ್ಣಿಗೆ ಕಾಣ್ತಿರೋದು ಯಾಕೆ ಅಂದ್ರೆ, ಅಲ್ಲಿನ ಕರೆನ್ಸಿ ವ್ಯಾಲ್ಯೂ ನಮ್ಮ ರುಪಾಯಿಗಿಂತ ಅರ್ಧಕ್ಕರ್ಧ ಕಮ್ಮಿ ಇದೆ ಅದಕ್ಕೆ.

ಭಾರತದ 1 ರೂಪಾಯಿಗೆ ಪಾಕಿಸ್ತಾನದ 2.20 ಪೈಸೆ ಹಾಕ್ಬೇಕು. ಅಂದ್ರೆ ನಮ್ಮ 45 ಪೈಸೆ – ಪಾಕಿಸ್ತಾನದ 1 ರೂಪಾಯಿಗೆ ಸಮ. ಇನ್ನೂ ಸಿಂಪಲ್ ಆಗಿ ಹೇಳ್ಬೇಕು ಅಂದ್ರೆ, ಉದಾಹರಣೆಗೆ ಒಂದು ಶರ್ಟ್​ಗೆ ವಿದೇಶೀ ವ್ಯಾಪಾರಿ 6 ಡಾಲರ್ ಅಂತಾ ಹೇಳ್ದ ಅನ್ಕೊಳಿ. ಅದಕ್ಕೆ ನಾವು 438 ಇಂಡಿಯನ್ ರುಪೀಸ್ ಕೊಟ್ರೆ ಸಾಕು. ಅದೇ 6 ಡಾಲರ್ ಶರ್ಟ್ ಪಕ್ಕದಲ್ಲಿರೋ ಪಾಕಿಸ್ತಾನದ ಪ್ರಜೆಗೂ ಇಷ್ಟ ಆಯಿತು ಅಂದ್ರೆ ಆತ 966 ಪಾಕಿಸ್ತಾನಿ ರುಪೀ ಕೊಡ್ಬೇಕು.

ಸೋ ಅಲ್ಲಿ ಈಗ ಪೆಟ್ರೋಲ್ ಬೆಲೆ 109 ಪಾಕಿಸ್ತಾನಿ ರುಪೀ ಆಗಿರೋದೇ ದೊಡ್ಡ ಗಲಾಟೆ ಆಗ್ತಿದೆ. ಆದ್ರೆ ಭಾರತದ ಲೆಕ್ಕದಲ್ಲಿ ಬರೀ 49.49 ಪೈಸೆ ಒಂದು ಲೀಟರ್ ಪೆಟ್ರೋಲ್​ಗೆ ಪಾಕಿಸ್ತಾನದಲ್ಲಿ. ಈ ರೇಟು ಭಾರತದಲ್ಲಿ ಆಲ್ಮೋಸ್ಟ್ 15 ವರ್ಷಗಳ ಹಿಂದೆ ಇತ್ತು. ಈಗ ಭಾರತದಲ್ಲಿ 87.57 ರೂಪಾಯಿ ರೀಚ್ ಆಗಿದೆ. ಈ ಕ್ಷಣಕ್ಕೆ ಪಾಕಿಸ್ತಾನದ ಪೆಟ್ರೋಲ್ ರೇಟು ನಮಗಿಂತಾ ಕಾಸ್ಟ್ಲಿ ಆಗ್ಬೇಕಂದ್ರೆ ಅಲ್ಲಿ ಒಂದು ಲೀಟರ್​ಗೆ 191 ಪಾಕಿಸ್ತಾನಿ ರೂಪಾಯಿ ಇರ್ಬೇಕು. ಸೋ ಗಾಡಿ ಓಡಿಸೋ ವಿಚಾರದಲ್ಲಿ ಪಾಕ್ ಚೀಪ್.

ಇನ್ನು ರೂಪಾಯಿ ಮಹಿಮೆ ಒಂಚೂರು ತಿಳ್ಕೊಳ್ಳೇಬೇಕು.

ಈಗ ಎಲ್ಲೆಲ್ಲಿ ಇದೆ..?
ಭಾರತ ರೂಪಾಯಿ / ರುಪೀ
ಇಂಡೋನೇಷಿಯಾ – ರುಪೈಯ್ಯಾ
ಮಾಲ್ಡೀವ್ಸ್ – ರುಫಿಯಾ
ಮಾರಿಶಸ್ – ರುಪೀ
ನೇಪಾಳ – ರುಪೀ
ಪಾಕಿಸ್ತಾನ – ರುಪೀ
ಸೈಶೆಲ್ಲಸ್ – ರುಪೀ
ಶ್ರೀಲಂಕ – ರುಪೀ

ಮೊದಲು ಎಲ್ಲೆಲ್ಲಿ ಇತ್ತು?

ಅಫ್ಘಾನಿಸ್ತಾನ – ರುಪೀ
ಸೌದಿ ಅರೇಬಿಯಾ – ಗಲ್ಫ್ ರುಪೀ
ಯುಎಇ – ಗಲ್ಫ್ ರುಪೀ
ಇರಾಕ್ – ಗಲ್ಫ್ ರುಪೀ
ಕುವೈತ್ – ಗಲ್ಫ್ ರುಪೀ
ಬಹ್ರೇನ್ – ಗಲ್ಫ್ ರುಪೀ
ಕತಾರ್ – ಗಲ್ಫ್ ರುಪೀ
ಓಮಾನ್ – ಗಲ್ಫ್ ರುಪೀ
ಟಿಬೆಟ್ – ರುಪೀ
ಆಸ್ಟ್ರೇಲಿಯಾ – ರುಪೀ (ಈಸ್ಟ್ ಇಂಡಿಯಾ ಕಂಪನಿ ಸಮಯದಲ್ಲಿ)

ರೂಪಾಯಿ ಇತಿಹಾಸ

ರೂಪಾಯಿ ಇತಿಹಾಸ ಸಾವಿರಾರು ವರ್ಷಗಳಷ್ಟು ಹಿಂದೆ ಹೋಗುತ್ತೆ. ಮೌರ್ಯ ಸಾಮ್ರಾಜ್ಯದ ಸಾಮ್ರಾಟ ಚಂದ್ರಗುಪ್ತ ಮೌರ್ಯರ ಪ್ರಧಾನಿಯಾಗಿದ್ದ ಆಚಾರ್ಯ ಚಾಣಕ್ಯರು ತಮ್ಮ ಪುಸ್ತಕ ಅರ್ಥಶಾಸ್ತ್ರದಲ್ಲಿ ಈ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಬೆಳ್ಳಿ ನಾಣ್ಯವನ್ನ ಅವ್ರು ‘ರುಪ್ಯಾರೂಪ’ ಅಂತ ಕರೆದಿದ್ದಾರೆ. ಇಲ್ಲಿ ರುಪ್ಯಾ ಅಂದ್ರೆ ಸಂಸ್ಕೃತದಲ್ಲಿ ಬೆಳ್ಳಿ ನಾಣ್ಯ.., ರೂಪ ಅಂದ್ರೆ ಸ್ವರೂಪ ಅಥವ ಕನ್ನಡದ ರೂಪ ಅಂತಾನೆ ಅನ್ಕೊಳ್ಳಿ. ಸೋ, ಸಂಸ್ಕೃತದ ರುಪ್ಯಾನೇ ಮುಂದೆ ಸುರಿ ವಂಶದ ಶೇರ್ ಶಾ ಸೂರಿ ಆಳ್ವಿಕೆ ಟೈಮಲ್ಲಿ 1,540-45 ವೇಳೆಗೆ ರುಪಿಯಾ ಅನ್ನೋ ಬೆಳ್ಳಿ ನಾಣ್ಯ ಆಗಿ ಬಂತು. ನಂತರ ಮುಂದೆ ಮೊಘಲರು ಬಂದು ರುಪಿಯಾವನ್ನ ಇಡೀ ದೇಶಕ್ಕೆ ಹರಡಿದ್ರು. ನಂತರ ಹಲವು ಬದಲವಾಣೆಗಳಾಗಿ ಈಗ ನಾವ್ ನೋಡ್ತಿರೋ ಇಂಡಿಯನ್ ರುಪೀ ಅಥವಾ ರೂಪಾಯಿ ಬಂದಿದೆ.

ಈ ಸಿಂಬಲ್ ಕೂಡ ಮುಂಚೆ ಇರ್ಲಿಲ್ಲ. ಆಗ ಬರೀ INR ಅಥವಾ Rs.​ ಅಂತಾ ಹಾಕ್ತಿದ್ರು. 2010ನೇ ಇಸವಿಯಲ್ಲಿ ಡಾಲರ್​​, ಯೂರೋ, ಯೆನ್​ ಥರಾ ನಮಗೂ ಒಂದು ಸಿಂಬಲ್ ಇರಲಿ ಅಂತಾ ಈ ಸಿಂಬಲ್​ ಅನ್ನ ಅಳವಡಿಸಿಕೊಳ್ಳಲಾಯ್ತು.

-masthmagaa.com

Contact Us for Advertisement

Leave a Reply