ಹೈದ್ರಾಬಾದ್​​​​​​ನಲ್ಲಿ 2ನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ..!!

masthmagaa.com:

ತೆಲಂಗಾಣ: ಹೈದ್ರಾಬಾದ್ ಮಹಾನಗರ ಪಾಲಿಕೆ(GHMC) ಚುನಾವಣೆಯಲ್ಲಿ ಬಿಜೆಪಿ ಅಚ್ಚರಿಯ ರೀತಿಯಲ್ಲಿ ಯಶಸ್ಸು ಸಾಧಿಸಿದೆ. 150 ವಾರ್ಡ್​​ಗಳ ಪೈಕಿ ಟಿಆರ್​ಎಸ್​​​​ 55 ಸ್ಥಾನಗಳನ್ನು ಪಡೆದುಕೊಂಡ್ರೆ, ಬಿಜೆಪಿ 48 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ. ಅಸಾದುದ್ದೀನ್ ಓವೈಸಿಯ ಎಐಎಂಐಎಂ 44 ಸ್ಥಾನಗಳನ್ನು ಪಡೆದುಕೊಂಡ್ರೆ, ಕಾಂಗ್ರೆಸ್ ಕಳೆದ ಬಾರಿಯಂತೆ ಈ ಬಾರಿಯೂ 2 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ಹೈಕೋರ್ಟ್​ ಆದೇಶದಂತೆ ನೆರೆದ್ಮೆಟ್​​ ಕ್ಷೇತ್ರದಲ್ಲಿ ಮತ ಎಣಿಕೆ ನಿಲ್ಲಿಸಲಾಗಿದ್ದು, ಉಳಿದೆಲ್ಲಾ ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದೆ.

ಹೆಚ್ಚು ಕ್ಷೇತ್ರಗಳನ್ನು ಟಿಆರ್​ಎಸ್​ ಗೆದ್ದಿದ್ರೂ ಬಿಜೆಪಿಯ ಗೆಲುವು ಎಲ್ಲರ ಗಮನ ಸೆಳೆದಿದೆ. ಯಾಕಂದ್ರೆ ಕಳೆದ ಬಾರಿ 4 ಕ್ಷೇತ್ರಗಳನ್ನು ಗೆದ್ದಿದ್ದ ಬಿಜೆಪಿ ಈ ಬಾರಿ 48 ಕ್ಷೇತ್ರಗಳನ್ನು ಗೆದ್ದಿದೆ. ಅದೇ ರೀತಿ ಕಳೆದ ಬಾರಿ 99 ಕ್ಷೇತ್ರಗಳನ್ನು ಗೆದ್ದಿದ್ದ ಟಿಆರ್​ಎಸ್​​ ಶೇ.40ರಷ್ಟು ಸ್ಥಾನಗಳ ಕುಸಿತದೊಂದಿಗೆ 55ಕ್ಕೆ ಬಂದು ನಿಂತಿದೆ. ಆದ್ರೆ ಟಿಆರ್​​​​ಎಸ್​ ಮತ್ತು ಬಿಜೆಪಿಯಲ್ಲಿ ಇಷ್ಟೆಲ್ಲಾ ಏರಿಳಿತ ಆದ್ರೂ ಕೂಡ ಎಐಎಂಐಎಂ ಮತ್ತು ಕಾಂಗ್ರೆಸ್​ ಕಳೆದ ಬಾರಿಯಷ್ಟೇ ಸ್ಥಾನಗಳನ್ನು ಪಡೆದುಕೊಂಡಿವೆ..

-masthmagaa.com

Contact Us for Advertisement

Leave a Reply