masthmagaa.com:

ಹೈದ್ರಾಬಾದ್​ ಮಹಾ ನಗರ ಪಾಲಿಕೆ (GHMC) ಚುನಾವಣೆಗೆ ಸಂಬಂಧಿಸಿದಂತೆ ದಿನಕ್ಕೊಂದು ಬೆಳವಣಿಗೆ ನಡೆಯುತ್ತಿದೆ. ಇದೀಗ ಚುನಾವಣಾ ಪ್ರಚಾರದ ವೇಳೆ ಉಸ್ಮಾನಿಯಾ ಯುನಿವರ್ಸಿಟಿ ಒಳಗೆ ಬಂದಿದ್ದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ ದಾಖಲಾಗಿದೆ. ಯುನಿವರ್ಸಿಟಿ ಆಡಳಿತ ಮಂಡಳಿಯಿಂದ ಅವರು ಅನುಮತಿ ಪಡೆಯದೇ ಬಂದಿದ್ರು ಅಂತ ಯುನಿವರ್ಸಿಟಿಯ ರೆಜಿಸ್ಟ್ರಾರ್ ದೂರು ದಾಖಲಿಸಿದ್ದಾರೆ ಅಂತ ತೆಲಂಗಾಣ ಡಿಜಿಪಿ ಹೇಳಿದ್ದಾರೆ. ತೇಜಸ್ವಿ ಸೂರ್ಯ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದರು ಮತ್ತು ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರಾಗಿದ್ದಾರೆ. ಅಂದ್ಹಾಗೆ ಈ ಬಾರಿಯ GHMC ಚುನಾವಣೆ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿ ಮತ್ತು ಟಿಆರ್​ಎಸ್​-ಎಐಎಂಐಎಂ ಪಕ್ಷಗಳ ನಡುವೆ ಜಿದ್ದಾಜಿದ್ದಿನ ಫೈಟ್​ ಏರ್ಪಟ್ಟಿದೆ. ಇದರ ನಡುವೆಯೇ ಆರೋಪ, ಪ್ರತ್ಯಾರೋಪ, ವಿವಾದಾತ್ಮಕ ಹೇಳಿಕೆಗಳು ಕೂಡ ಕೇಳಿ ಬರ್ತಿವೆ.

-masthmagaa.com

Contact Us for Advertisement

Leave a Reply