masthmagaa.com:

ಇತ್ತೀಚೆಗಷ್ಟೇ ‘ನಿವಾರ್’ ಚಂಡಮಾರುತದ ಪೆಟ್ಟು ತಿಂದಿದ್ದ ದಕ್ಷಿಣ ಭಾರತದ ರಾಜ್ಯಗಳಿಗೆ ಈಗ ಮತ್ತೊಂದು ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಕಾಣ್ತಿದೆ. ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಮುಂದಿನ 24 ಗಂಟೆಗಳ ಅವಧಿಯಲ್ಲಿ ಚಂಡಮಾರುತದ ರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಈ ಚಂಡಮಾರುತವು ಶ್ರೀಲಂಕಾವನ್ನು ದಾಟಿ ತಮಿಳುನಾಡು, ಕೇರಳ ಮೂಲಕ ಹಾದು ಹೋಗಲಿದೆ. ಇದರ ಪರಿಣಾಮ ಡಿಸೆಂಬರ್ 1 ರಿಂದ 3ರವರೆಗೆ ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಲಕ್ಷದ್ವೀಪದ ಹಲವೆಡೆ ಧಾರಾಕಾರ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಕರ್ನಾಟಕದಲ್ಲಿ ಮುಂದಿನ 2 ದಿನಗಳ ಕಾಲ ಯಾವುದೇ ಮಳೆ ಮುನ್ಸೂಚನೆ ಇಲ್ಲ ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ. ಭಾರತೀಯ ಹವಾಮಾನ ಇಲಾಖೆ ಇಂದು ಬಿಡುಗಡೆ ಮಾಡಿರುವ ಉಪಗ್ರಹ ಚಿತ್ರ ಮತ್ತು ವಾಯುಭಾರ ಕುಸಿತದ ದಿಕ್ಕಿನ ಚಿತ್ರಗಳು ಇಲ್ಲಿವೆ ನೋಡಿ..

-masthmagaa.com

Contact Us for Advertisement

Leave a Reply