ಪ್ಲೀಸ್ ಹೆಲ್ಪ್​ ಮಾಡಿ.. ಸೋಷಿಯಲ್ ಮೀಡಿಯಾದಲ್ಲಿ ಜನರ ಅಳಲು!

masthmagaa.com:

ದೆಹಲಿ: ಭಾರತದಲ್ಲಿ ಕೊರೋನಾ ಯಾವ ಲೆವೆಲ್​​ಗೆ ಹೋಗಿದೆ ಅಂದ್ರೆ ಜನ ಸಹಾಯಕ್ಕಾಗಿ ಮೊರೆ ಇಡ್ತಿದ್ದಾರೆ. ಅದಕ್ಕಾಗಿ ಸೋಷಿಯಲ್ ಮೀಡಿಯಾ ಬಳಸಿಕೊಳ್ತಿದ್ದಾರೆ. ಟ್ವಿಟ್ಟರ್​ನಲ್ಲಿ ಆಕ್ಸಿಜನ್, ಬೆಡ್ ಮತ್ತು ಔಷಧಕ್ಕಾಗಿ ಅಪರಿಚಿತರ ಬಳಿಯೆಲ್ಲಾ ಸಹಾಯಕ್ಕಾಗಿ ಯಾಚಿಸ್ತಿದ್ದಾರೆ. ಪೇಷೆಂಟ್​​ಗಳ ಡೀಟೇಲ್ ಶೇರ್ ಮಾಡಿ, ಸಹಾಯ ಮಾಡಿ ಅಂತ ಮನವಿ ಮಾಡ್ತಿದ್ದಾರೆ. ಅದೇ ರೀತಿ ಟ್ವಿಟ್ಟರ್​​ ಬಳಕೆದಾರರು ಕೂಡ ಸಹಾಯ ಹಸ್ತ ಚಾಚುತ್ತಿದ್ದಾರೆ. ಕೆಲವರು ಆಕ್ಸಿಜನ್ ಸಿಲಿಂಡರ್​​ ಎಲ್ಲಿ ಸಿಗುತ್ತೆ ಅಂತ ಟ್ವೀಟ್ ಮಾಡಿದ್ರೆ, ಇನ್ನು ಕೆಲವರು ಇಂತಿಂಥಾ ಆಸ್ಪತ್ರೆಯಲ್ಲಿ ಖಾಲಿ ಬೆಡ್ ಇದೆ ನೋಡಿ ಅಂತ ಮಾಹಿತಿ ನೀಡ್ತಿದ್ದಾರೆ. ಕೆಲವರು ಪ್ಲಾಸ್ಮಾ ದಾನ ಮಾಡಿ ಅಂತ ಜನರ ಬಳಿ ಮನವಿ ಮಾಡ್ತಿದ್ರೆ, ಇನ್ನು ಕೆಲವರು ಸೇಫ್ ಆಗಿರೋದು ಹೇಗೆ ಅಂತ ಸಲಹೆ ಕೊಡ್ತಿದ್ದಾರೆ.

-masthmagaa.com

Contact Us for Advertisement

Leave a Reply