ಭಾರತ-ಆಸ್ಟ್ರೇಲಿಯಾ ಮೊದಲ ಟೆಸ್ಟ್: 2ನೇ ದಿನದ ಅಂತ್ಯಕ್ಕೆ ಭಾರತ 9/1

masthmagaa.com:

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಅಡಿಲೇಡ್​​ನಲ್ಲಿ ನಡೆಯುತ್ತಿರುವ ಮೊದಲ ಡೇ-ನೈಟ್​ ಟೆಸ್ಟ್ ಪಂದ್ಯ ರೋಚಕ ಗಟ್ಟ ತಲುಪಿದೆ. ಭಾರತವೇ ಸ್ವಲ್ಪ ಮೇಲುಗೈ ಸಾಧಿಸಿದಂತೆ ಕಾಣ್ತಿದೆ. ಮೊದಲ ದಿನವಾದ ನಿನ್ನೆ 6 ವಿಕೆಟ್​ ಕಳೆದುಕೊಂಡು 233 ರನ್ ಗಳಿಸಿದ್ದ ಟೀಂ ಇಂಡಿಯಾ ಇವತ್ತು ಕೇವಲ 11 ರನ್ ಸೇರಿಸಿ 244 ರನ್​ಗಳಿಗೆ ಆಲೌಟ್ ಆಯ್ತು. ನಂತರ ಬ್ಯಾಟಿಂಗ್​ ಮಾಡಿದ ಆಸ್ಟ್ರೇಲಿಯಾ 191 ರನ್​ಗೆ ಆಲೌಟ್​ ಆಯ್ತು. ಆಸ್ಟ್ರೇಲಿಯಾ ಪರ ನಾಯಕ ಟಿಮ್ ಪೈನೆ 73 ರನ್ ಸಿಡಿಸಿ ಅಜೇಯರಾಗಿ ಉಳಿದ್ರು. ಭಾರತದ ಪರ ಅಶ್ವಿನ್​ 4​, ಉಮೇಶ್ ಯಾದವ್ 3 ಮತ್ತು ಬುಮ್ರಾ 2 ವಿಕೆಟ್​ ಪಡೆದ್ರು. 53 ರನ್ ಮುನ್ನಡೆ ಪಡೆದು ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತಕ್ಕೆ ಓಪನರ್​ ಪೃಥ್ವಿ ಶಾ ಮತ್ತೆ ಕೈ ಕೊಟ್ರು. ಕೇವಲ 4 ರನ್ ಗಳಿಸಿ ಔಟಾದ್ರು. ಎರಡನೇ ದಿನದ ಅಂತ್ಯಕ್ಕೆ ಭಾರತ 1 ವಿಕೆಟ್ ಕಳೆದುಕೊಂಡು 9 ರನ್​ ಗಳಿಸಿದೆ. ಮಯಾಂಗ್ ಅಗರ್​ವಾಲ್ 5 ಮತ್ತು ಬುಮ್ರಾ 0 ರನ್​ಗಳೊಂದಿಗೆ 3ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಮೊದಲ ಇನ್ನಿಂಗ್ಸ್​ನ 53 ಮತ್ತು 2ನೇ ಇನ್ನಿಂಗ್ಸ್​ನ 9 ರನ್ ಸೇರಿಸಿ ಭಾರತ ಒಟ್ಟು 62 ರನ್​ಗಳ ಮುನ್ನಡೆ ಸಾಧಿಸಿದೆ. ಇದನ್ನ ನೋಡಿದ್ರೆ ಲೋ ಸ್ಕೋರಿಂಗ್​ನ ಈ ಪಂದ್ಯ ನಾಲ್ಕೇ ದಿನಕ್ಕೆ ಮುಗಿಯುವ ಲಕ್ಷಣ ಕಾಣ್ತಿದೆ.

-masthmagaa.com

Contact Us for Advertisement

Leave a Reply