masthmagaa.com:

ದೇಶದಲ್ಲಿ ಕೊರೋನಾ ಹಾವಳಿ ಮಿತಿಮೀರಿದ್ದು ಒಟ್ಟು ಸೋಂಕಿತರ ಸಂಖ್ಯೆ 8 ಲಕ್ಷ ಗಡಿ ದಾಟಿದೆ. ಕೊರೋನಾ ಹರಡುತ್ತಿರುವ ವೇಗ ಹೇಗಿದೆ ಅಂದ್ರೆ, ಕೇವಲ 4 ದಿನಗಳಲ್ಲಿ ಬರೋಬ್ಬರಿ 1 ಲಕ್ಷ ಪ್ರಕರಣ ದೃಢಟ್ಟಿದೆ.  ಕಳೆದ 9 ದಿನಗಳಲ್ಲಿ 2 ಲಕ್ಷ ಜನರಿಗೆ ಸೋಂಕು ತಗುಲಿದೆ. ಆರಂಭದಲ್ಲಿ 1 ಪ್ರಕರಣದಿಂದ 2 ಲಕ್ಷ ಪ್ರಕರಣ ದೃಢಪಡಲು 124 ದಿನಗಳು ಬೇಕಾಗಿತ್ತು.

ಆದ್ರೀಗ ಕೇವಲ 9 ದಿನಗಳಲ್ಲೇ 2 ಲಕ್ಷ ಪ್ರಕರಣ ದೃಢಪಟ್ಟಿರೋದು ಆತಂಕದ ವಿಚಾರ. ಮಹಾರಾಷ್ಟ್ರ, ತಮಿಳುನಾಡು, ದೆಹಲಿ ಮುಂತಾದ ರಾಜ್ಯಗಳು ಕೊರೋನಾ ಆರ್ಭಟಕ್ಕೆ ತತ್ತರಿಸಿವೆ. ಕರ್ನಾಟಕದಲ್ಲೂ ಕೊರೋನಾ ಹಾವಳಿ ಜೋರಾಗಿದ್ದು, ರಾಜ್ಯವಾರು ಸೋಂಕಿತರ ಪಟ್ಟಿಯಲ್ಲಿ 7ನೇ ಸ್ಥಾನದಿಂದ 6ನೇ ಸ್ಥಾನಕ್ಕೆ ಬಂದಿದೆ ಕರ್ನಾಟಕ.

ದೇಶದಲ್ಲಿ ಕೊರೋನಾ ವೇಗ ಹೇಗಿದೆ ಗೊತ್ತಾ..?

1 ಪ್ರಕರಣದಿಂದ 2 ಲಕ್ಷ ಪ್ರಕರಣಕ್ಕೆ 124 ದಿನ

2 ಲಕ್ಷದಿಂದ 4 ಲಕ್ಷ ಪ್ರಕರಣಕ್ಕೆ 18 ದಿನ

4 ಲಕ್ಷದಿಂದ 6 ಲಕ್ಷ ಪ್ರಕರಣಕ್ಕೆ 11 ದಿನ

6 ಲಕ್ಷದಿಂದ 8 ಲಕ್ಷ ಪ್ರಕರಣಕ್ಕೆ 9 ದಿನ

ಇನ್ನು ದೇಶದಲ್ಲಿ ಇದುವರೆಗೆ 22,123 ಸೋಂಕಿತರು ಪ್ರಾಣ ಕಳೆದುಕೊಂಡಿದ್ದಾರೆ. 5,15,386 ಸೋಂಕಿತರು ಗುಣಮುಖರಾಗಿದ್ದು 2,83,407 ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಾಗತಿಕ ಸೋಂಕಿತರ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದ್ದು, ಬ್ರೆಜಿಲ್ ಎರಡನೇ ಸ್ಥಾನದಲ್ಲಿದೆ, ಭಾರತ ಮೂರನೇ ಸ್ಥಾನದಲ್ಲಿದೆ.

-masthmagaa.com

Contact Us for Advertisement

Leave a Reply