masthmagaa.com:

ಬಾಲಿವುಡ್ ನಟಿ ಕಂಗನಾ ರನಾವತ್ ಅವರ ಕಚೇರಿಯನ್ನು ಮುಂಬೈ ಪಾಲಿಕೆ ಸಿಬ್ಬಂದಿ ಕೆಡವಿದ ವಿಚಾರ ಇತ್ತೀಚೆಗೆ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ತಮಗಾದ ನಷ್ಟಕ್ಕೆ ಕಂಗನಾ ಬರೋಬ್ಬರಿ 2 ಕೋಟಿ ರೂಪಾಯಿ ಪರಿಹಾರ ಕೇಳಿದ್ದಾರೆ. ಪಾಲಿಕೆ ವಿರುದ್ಧ ಬಾಂಬೆ ಹೈಕೋರ್ಟ್​ಗೆ ಈ ಹಿಂದೆ ಸಲ್ಲಿಸಿದ್ದ ಅರ್ಜಿಗೆ ಕೆಲವೊಂದು ಅಂಶಗಳನ್ನ ಸೇರಿಸಿ 2 ಕೋಟಿ ಪರಿಹಾರಕ್ಕೆ ಆಗ್ರಹಿಸಿದ್ದಾರೆ.

‘ಬಂಗಲೆಯ ಶೇ. 40ರಷ್ಟು ಭಾಗವನ್ನು ಬಿಎಂಸಿ ಕೆಡವಿದೆ. ಇದರಲ್ಲಿ ಬೆಲೆ ಬಾಳುವ ಚರಾಸ್ತಿಗಳಾದ ಸೋಫಾ, ಅಪರೂಪರದ ಆರ್ಟ್​ಗಳು ಇದ್ದವು. ಇದರಿಂದ ನನಗೆ 2 ಕೋಟಿ ನಷ್ಟವಾಗಿದೆ. ಅದನ್ನು ಪರಿಹಾರವಾಗಿ ಕೊಡಬೇಕು’ ಅಂತ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಈ ಎಲ್ಲಾ ಅಂಶಗಳನ್ನು ಸೇರಿಸಿರುವುದರಿಂದ ಮೊದಲು 29 ಪುಟಗಳಿದ್ದ ಅರ್ಜಿ ಈಗ ಬರೋಬ್ಬರಿ 92 ಪುಟಗಳದ್ದಾಗಿದೆ. ಸೋಮವಾರದೊಳಗೆ ಅರ್ಜಿಗೆ ಕೆಲವೊಂದು ಅಂಶಗಳನ್ನು ಸೇರಿಸುತ್ತೇವೆ ಅಂತ ಕಂಗನಾ ಪರ ವಕೀಲ ರಿಜ್ವಾನ್ ಸಿದ್ದಿಕಿ ಕಳೆದ ಗುರುವಾರ ಕೋರ್ಟ್​ಗೆ ಹೇಳಿದ್ದರು.

-masthmagaa.com

Contact Us for Advertisement

Leave a Reply