ರಾಜ್ಯದಲ್ಲಿ ಕೊರೋನಾಗೆ 6ನೇ ಬಲಿ.. ಗದಗದಲ್ಲಿ ವೃದ್ದೆ ಸಾವು..!

masthmagaa.com:

ರಾಜ್ಯದಲ್ಲಿ ಕೊರೋನಾ ಅಬ್ಬರ ದಿನೇ ದಿನೇ ಹೆಚ್ಚಾಗ್ತಿದ್ದು, ಸಾವನ್ನಪ್ಪಿದವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ‌. ಗದಗದಲ್ಲಿ 80 ವರ್ಷದ ವೃದ್ದೆ ಕೊರೋನಾದಿಂದ ಮೃತಪಟ್ಟಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಮನೆಮಾಡಿದೆ. ವೃದ್ದೆಗೆ ಯಾರ ಸಂಪರ್ಕವೂ ಇರಲಿಲ್ಲ. ವಿದೇಶ, ದೇಶ, ರಾಜ್ಯ ಹೀಗೆ ಎಲ್ಲೂ ಪ್ರಯಾಣ ಕೂಡ ಮಾಡಿರಲಿಲ್ಲ. ಹೀಗಾಗಿ ಸೋಂಕು ಹರಡಿದ್ದು ಹೇಗೆ ಅನ್ನೋದೇ ದೊಡ್ಡ ಪ್ರಶ್ನೆಯಾಗಿದೆ. ಸದ್ಯ ವೃದ್ದೆ ಇದ್ದ ಏರಿಯಾವನ್ನು ಲಾಕ್ ಡೌನ್ ಮಾಡಿದ್ದು, ಆಕೆಯ ಸಂಪರ್ಕದಲ್ಲಿ ಇದ್ದವರನ್ನೆಲ್ಲಾ ಕ್ವಾರಂಟೈನ್ ಮಾಡಿ, ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಕೊರೋನಾ ನಿಯಮದಂತೆ ವೃದ್ಧೆಯ ಅಂತ್ಯಕ್ರಿಯೆ ನೆರವೇರಿಸಲಾಗಿದೆ‌. ಇದಕ್ಕೂ ಮುನ್ನ ಕಲಬುರಗಿಯಲ್ಲಿ ಇಬ್ಬರು, ಚಿಕ್ಕಬಳ್ಳಾಪುರ, ತುಮಕೂರು, ಗದಗ ಮತ್ತು ಬಾಗಲಕೋಟೆಯಲ್ಲಿ ತಲಾ ಒಬ್ಬರು ಈ ಮಹಾಮಾರಿಗೆ ಬಲಿಯಾಗಿದ್ದರು.

-masthmagaa.com

 

Contact Us for Advertisement

Leave a Reply