masthmagaa.com:

ರಾಜ್ಯದಲ್ಲಿ ಇಂದು 1,501 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದ್ದು, 32 ಜನ ಮುೃತಪಟ್ಟಿದ್ಧಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 28,97,664 ಆಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 36,437 ಆಗಿದೆ. ಇಂದು 2,039 ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 28,38,717 ಆಗಿದೆ. ರಾಜ್ಯದಲ್ಲಿ ಇನ್ನೂ ಕೂಡ 22,487 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಇವತ್ತು 1,02,494 ಪರೀಕ್ಷೆಗಳನ್ನ ನಡೆಸಲಾಗಿದ್ದು, ಇದುವರೆಗೆ ಒಟ್ಟು 3,80,68,589 ಕೋಟಿ ಟೆಸ್ಟ್​ಗಳನ್ನ ನಡೆಸಿದಂತಾಗಿದೆ. ರಾಜ್ಯದಲ್ಲಿ ಇದುವರೆಗೆ ಒಟ್ಟು 2.93ಕೋಟಿಗೂ ಅಧಿಕ ಡೋಸ್ ಲಸಿಕೆ ಹಾಕಲಾಗಿದೆ.

ಇಂದು ಮೃತಪಟ್ಟವರು:

ಬೆಂಗಳೂರು ನಗರ 5
ಹಾಸನ 4
ಬೆಳಗಾವಿ 3
ಕೋಲಾರ 3
ಬೆಂಗಳೂರು ಗ್ರಾಮಾಂತರ 2
ಮೈಸೂರು 2
ತುಮಕೂರು 2
ಉತ್ತರ ಕನ್ನಡ 2
ಬಳ್ಳಾರಿ 1
ಚಿಕ್ಕಮಗಳೂರು 1
ಕೊಡಗು 1
ಕೊಪ್ಪಳ 1
ಮಂಡ್ಯ 1
ರಾಯಚೂರು 1
ರಾಮನಗರ 1
ಶಿವಮೊಗ್ಗ 1
ಉಡುಪಿ 1

-masthmagaa.com

 

Contact Us for Advertisement

Leave a Reply