masthmagaa.com:

ರಾಜ್ಯದಲ್ಲಿ ಇಂದು 328 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದ್ದು, 9 ಜನ ಮೃತಪಟ್ಟಿದ್ಧಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 29,90,856 ಆಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 38,131 ಆಗಿದೆ. ಇಂದು 247 ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 29,44,669 ಆಗಿದೆ. ರಾಜ್ಯದಲ್ಲಿ ಇನ್ನೂ ಕೂಡ 8,027 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವತ್ತು 1.17 ಲಕ್ಷಕ್ಕೂ ಅಧಿಕ ಪರೀಕ್ಷೆಗಳನ್ನ ನಡೆಸಲಾಗಿದ್ದು, ಇದುವರೆಗೆ ಒಟ್ಟು 5.16 ಕೋಟಿಗೂ ಹೆಚ್ಚು ಟೆಸ್ಟ್​ಗಳನ್ನ ನಡೆಸಿದಂತಾಗಿದೆ. ರಾಜ್ಯದಲ್ಲಿ ಇದುವರೆಗೆ ಒಟ್ಟು 6.74 ಕೋಟಿಗೂ ಹೆಚ್ಚು ಡೋಸ್ ಕೊರೋನಾ ಲಸಿಕೆ ಹಾಕಲಾಗಿದೆ.

ಇಂದು ಮೃತಪಟ್ಟವರು:

ಬೆಂಗಳೂರು ನಗರ 5
ದಕ್ಷಿಣ ಕನ್ನಡ 2
ಬೆಂಗಳೂರು ಗ್ರಾಮಾಂತರ 1
ರಾಮನಗರ 1

-masthmagaa.com

Contact Us for Advertisement

Leave a Reply