ಒಬ್ಬರಿಗೆ ಲಸಿಕೆ ಹಾಕಲು ಎಷ್ಟಾಗುತ್ತೆ? ಸರ್ಕಾರದ ಬಳಿ ಇರೋ ದುಡ್ಡೆಷ್ಟು?

masthmagaa.com:

ಜನಸಂಖ್ಯೆಯಲ್ಲಿ ಎರಡನೇ ದೊಡ್ಡ ದೇಶವಾದ ಭಾರತವು ಕೊರೋನಾ ಲಸಿಕೆಗಾಗಿ ಬರೋಬ್ಬರಿ 50,000 ಕೋಟಿ ರೂಪಾಯಿಯನ್ನು ರೆಡಿಯಾಗಿಟ್ಟುಕೊಂಡಿದೆ ಅಂತ ಮೂಲಗಳು ತಿಳಿಸಿವೆ. ಜೊತೆಗೆ ದೇಶದ ಓರ್ವ ನಾಗರಿಕನಿಗೆ ಲಸಿಕೆ ಹಾಕಲು ಎಲ್ಲಾ ಖರ್ಚುಗಳನ್ನ ಸೇರಿದ್ರೆ 450ರಿಂದ 500 ರೂಪಾಯಿ ಖರ್ಚಾಗಬಹುದು ಅಂತ ಕೇಂದ್ರ ಸರ್ಕಾರ ಅಂದಾಜಿಸಿದೆ. ನಮ್ಮ ದೇಶದ ಜನಸಂಖ್ಯೆ 135 ಕೋಟಿಗೂ ಹೆಚ್ಚಿದೆ.

ಇತ್ತೀಚೆಗೆ ಸೀರಂ ಇನ್​ಸ್ಟಿಟ್ಯೂಟ್​ ಆಫ್ ಇಂಡಿಯಾದ ಮುಖ್ಯಸ್ಥ ಅದಾರ್ ಪೂನಾವಾಲಾ, ಭಾರತದಲ್ಲಿ ಎಲ್ಲರಿಗೂ ಕೊರೋನಾ ಲಸಿಕೆ ಸಿಗಬೇಕು ಅಂದ್ರೆ 80,000 ಕೋಟಿ ರೂಪಾಯಿ ಬೇಕಾಗಬಹುದು. ಅಷ್ಟು ಹಣ ಕೇಂದ್ರ ಸರ್ಕಾರ ಬಳಿ ಇದೆಯಾ..? ಅಂತ ಕೇಳಿದ್ದರು. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಲಸಿಕೆಗಾಗಿ 50,000 ಕೋಟಿ ರೂಪಾಯಿ ಮೀಸಲಿಟ್ಟಿದೆ ಅನ್ನೋ ವಿಚಾರ ಈಗ ಗೊತ್ತಾಗಿದೆ.

-masthmagaa.com

Contact Us for Advertisement

Leave a Reply