ಕೃಷಿ ಕಾನೂನು ವಿರೋಧಿ ವಿಪಕ್ಷಗಳಿಗೆ ಬಟ್ಟೆಯಲ್ಲಿ ಕಲ್ಲು ಸುತ್ತಿ ಹೊಡೆದ ಮೋದಿ!

masthmagaa.com:

ದೆಹಲಿ: ಕೃಷಿ ಕಾನೂನುಗಳಿಗೆ ವಿರೋಧ ವ್ಯಕ್ತಪಡಿಸುತ್ತಿರುವ ವಿಪಕ್ಷಗಳಿಗೆ ಪ್ರಧಾನಿ ಮೋದಿ ಸರಿಯಾಗೇ ತಿರುಗೇಟು ಕೊಟ್ಟಿದ್ಧಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಮಾಜಿ ಪ್ರಧಾನಿ ದೇವೇಗೌಡರು ನಮ್ಮ ಸುಧಾರಣೆಯನ್ನು ಹೊಗಳಿದ್ದಾರೆ. ಜೊತೆಗೆ ಕೆಲವೊಂದು ಸಲಹೆಗಳನ್ನು ಕೂಡ ನೀಡಿದ್ದಾರೆ. ಆದ್ರೆ ಕೆಲ ವಿಪಕ್ಷ ನಾಯಕರು ಕೃಷಿ ಕಾನೂನಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ಮನಮೋಹನ್ ಸಿಂಗ್ ಕೂಡ ನಮ್ಮ ದೇಶದ ಕೃಷಿ ಕ್ಷೇತ್ರದಲ್ಲಿ 1930ರ ದಶಕದ ಕೆಲವೊಂದು ಕಾನೂನುಗಳಿವೆ. ಇವುಗಳು ರೈತರು ತಮ್ಮ ಬೆಳೆಯನ್ನು ಹೆಚ್ಚು ಬೆಲೆ ಸಿಗುವ ಜಾಗದಲ್ಲಿ ಮಾರಲು ಅಡ್ಡಿಪಡಿಸುತ್ತಿವೆ ಹೇಳಿದ್ದರು..  ಜೊತೆಗೆ ಇವುಗಳು ಕೃಷಿ ಕ್ಷೇತ್ರದಲ್ಲಿರೋ ದೋಷಗಳಾಗಿದ್ದು, ಅವುಗಳನ್ನು ತೆಗೆಯಬೇಕು ಅಂತ ಕೂಡ ಮನಮೋಹನ್ ಸಿಂಗ್ ಹೇಳಿದ್ದರು. ಈಗ ಅವರು ಹೇಳಿದ್ದನ್ನು ಮೋದಿ ಸರ್ಕಾರ ಮಾಡುತ್ತಿದೆ ಅಂತ ವಿಪಕ್ಷದವರು ಅರ್ಥ ಮಾಡಿಕೊಳ್ಳಬೇಕು ಅಂತ ಪ್ರಧಾನಿ ಮೋದಿ ಹೇಳಿದ್ಧಾರೆ. ರೈತರನ್ನು ಪ್ರಚೋದಿಸುವ ಬದಲು ರೈತರಿಗೆ ಸರಿಯಾದ ತಿಳುವಳಿಕೆ ನೀಡಿ, ಅವರ ಭವಿಷ್ಯವನ್ನು ಉಜ್ವಲಗೊಳಿಸಲು ಸಹಕರಿಸಬೇಕು.. ಇದ್ರಿಂದ ಏನೇ ಕೆಟ್ಟದಾದ್ರೂ ನನಗಿರಲಿ.. ಒಳ್ಳೆಯದಾದ್ರೆ ಅದರ ಫಲ ನಿಮಗೆ ಇಟ್ಟುಕೊಳ್ಳಿ.. ಆದ್ರೆ ಸದ್ಯ ನಾವೆಲ್ಲರೂ ಒಟ್ಟಾಗಿ ಮುಂದಕ್ಕೆ ಸಾಗೋಣ ಅಂತ ಮನವಿ ಮಾಡಿಕೊಂಡ್ರು. ಇದೇ ವೇಳೆ ದೇಶದಲ್ಲಿ ಎಂಎಸ್​​ಪಿ ಅಂದ್ರೆ ರೈತರ ಬೆಳೆಗಳಿಗೆ ಬೆಂಬಲ ಬೆಲೆ ಇತ್ತು.. ಈಗಲೂ ಇದೆ.. ಮುಂದೆಯೂ ಇರುತ್ತೆ ಅಂತ ಭರವಸೆ ನೀಡಿದ್ರು.

ಇನ್ನು ಕೆಲವು ಆಂದೋಲನ ಜೀವಿಗಳು ಯಾವುದೇ ಪ್ರತಿಭಟನೆ ಆದ್ರೂ ಕೂಡ ಅಲ್ಲಿ ಹೋಗಿ ಕೂತು ಬಿಡ್ತಾರೆ. ವಕೀಲರ ಪ್ರತಿಭಟನೆ ನಡೆದ್ರೆ ಅಲ್ಲಿಗೂ ಹೋಗ್ತಾರೆ.. ವಿದ್ಯಾರ್ಥಿಗಳ ಪ್ರತಿಭಟನೆ ಆದ್ರೆ ಅಲ್ಲೂ ಇರ್ತಾರೆ. ರೈತರ ಪ್ರತಿಭಟನೆ ಆದ್ರೆ ಅಲ್ಲೂ ಇರ್ತಾರೆ.. ಕಾರ್ಮಿಕರ ಪ್ರತಿಭಟನೆ ಆದ್ರೆ ಅಲ್ಲೂ ಇರ್ತಾರೆ. ಇಂಥವರು ಯಾವಾಗಲೂ ಆಂದೋಲನದಲ್ಲಿ ಇರಲು ಇಷ್ಟ ಪಡ್ತಾರೆ.. ಪ್ರತಿಭಟನೆ ಇಲ್ಲದೇ ಅವರು ಬದುಕಲು ಸಾಧ್ಯವಾಗೋದಿಲ್ಲ. ಹೀಗಾಗಿ ಆಂದೋಲನದ ಜೊತೆಗೆ ಬದುಕುವ ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ. ಯಾವುದೇ ಪ್ರತಿಭಟನೆ ನಡೆದ್ರೂ ಹೋಗಿ ಸೇರಿಕೊಂಡು ಬಿಡ್ತಾರೆ. ಇಂತಹ ಆಂದೋಲನ ಜೀವಿಗಳಿಂದ ಹುಷಾರಾಗಿ ಇರಬೇಕು.. ದೇಶವನ್ನು ಉಳಿಸಬೇಕು ಅಂತ ಹೇಳಿದ್ರು.

ಇದೇ ವೇಳೆ ಕೃಷಿ ಪ್ರತಿಭಟನೆಗೆ ವಿದೇಶದಿಂದ ವ್ಯಕ್ತವಾಗ್ತಿರೋ ಬೆಂಬಲ ಮತ್ತು ಟೂಲ್​ ಕಿಟ್ ಬಗ್ಗೆ ಪ್ರತಿಕ್ರಿಯಿಸಲು ಕೂಡ ಪ್ರಧಾನಿ ಮೋದಿ ಮರೆಯಲಿಲ್ಲ.. ಇದುವರೆಗೆ ಒಂದು ರೀತಿಯ ಎಫ್​ಡಿಐ ಇತ್ತು. ಅದು ನಿಮಗೆಲ್ಲರಿಗೂ ಗೊತ್ತು. ಫಾರಿನ್ ಡೈರೆಕ್ಟ್ ಇನ್ವೆಸ್ಟ್​ಮೆಂಟ್​​.. ಇದು ದೇಶಕ್ಕೆ ಅನಿವಾರ್ಯ.. ಆದ್ರೆ ಈಗ ಹೊಸದೊಂದು ಎಫ್​ಡಿಐ ಹುಟ್ಟಿಕೊಂಡಿದೆ. ಅದ್ರಿಂದ ದೇಶವನ್ನು ಉಳಿಸಬೇಕಿದೆ. ಅದೇ ಫಾರಿನ್ ಡಿಸ್ಟ್ರಕ್ಟಿವ್ ಐಡಿಯಾಲಜಿ.. ಇದ್ರಿಂದ ದೇಶವನ್ನ ಉಳಿಸಲು ನಾವು ಹುಷಾರಾಗಿ ಇರಬೇಕು ಅಂತ ಕರೆ ನೀಡಿದ್ರು.

-masthmagaa.com

Contact Us for Advertisement

Leave a Reply