masthmagaa.com:

ಕಳೆದ 24 ಗಂಟೆಗಳಲ್ಲಿ ಇಡೀ ಪ್ರಪಂಚದಲ್ಲಿ 2,19,000+ ಜನರಿಗೆ ಹೊಸದಾಗಿ ಸೋಂಕು ತಗುಲಿದೆ. ಈ ಮೂಲಕ ಜಾಗತಿಕ ಸೋಂಕಿತರ ಸಂಖ್ಯೆ 1,27,40,000+ ದಾಟಿದೆ. ಇದುವರೆಗೆ 5,65,000+ ಸಾವಿರ ಜನ ಮೃತಪಟ್ಟಿದ್ದಾರೆ. ಹಾಗೆಯೇ 70,21,000+ ಜನ ಗುಣಮುಖ ಕೂಡ ಆಗಿದ್ದಾರೆ.

ಸೋಂಕಿತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಒಂದೇ ದಿನ 61,000 ಜನರಿಗೆ ಸೋಂಕು ತಾಗಿದೆ. ಎರಡನೇ ಸ್ಥಾನದಲ್ಲಿರೋ ಬ್ರೆಜಿಲ್​ನಲ್ಲಿ ಒಂದೇ ದಿನ 39,000 ಜನರಿಗೆ ಸೋಂಕು ತಾಗಿದ್ದು, ಸಾವಿರಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. ಮೂರನೇ ಸ್ಥಾನದಲ್ಲಿರೋ ಭಾರತದಲ್ಲಿ 28,000+, ನಾಲ್ಕನೇ ಸ್ಥಾನದಲ್ಲಿರೋ ರಷ್ಯಾದಲ್ಲಿ 6,600 ಜನರಿಗೆ ಸೋಂಕು ತಗುಲಿದೆ.

ಇದನ್ನೂ ಓದಿ: ‘ಐಶ್ವರ್ಯಾ ರೈಗೆ ಕೊರೋನಾ’.. ಗೊಂದಲಕ್ಕೆ ಕಾರಣವಾಯ್ತು ಮಹಾರಾಷ್ಟ್ರ ಸಚಿವರ ಟ್ವೀಟ್

ಇನ್ನು ಈ ಸೋಂಕು ಮೊದಲಿಗೆ ಕಾಣಿಸಿಕೊಂಡಿದ್ದ ಚೀನಾದಲ್ಲಿ ಕಳೆದ 24 ಗಂಟೆಗಳಲ್ಲಿ ಕೇವಲ 7 ಪ್ರಕರಣ ದೃಢಪಟ್ಟಿದೆ. ಇಟಲಿಯಲ್ಲಿ 188 ಪ್ರಕರಣ ದೃಢಪಟ್ಟಿದೆ. ಇದರಲ್ಲಿ ಹೆಚ್ಚಿನ ಪ್ರಕರಣ ಉತ್ತರ ಇಟಲಿಯ ಲೊಂಬಾರ್ಡಿ ಪ್ರದೇಶಕ್ಕೆ ಸೇರಿದ್ದಾಗಿದೆ.

-masthmagaa.com

Contact Us for Advertisement

Leave a Reply