ಒಡಿಶಾದಲ್ಲಿ ಲಾಕ್​ಡೌನ್ ಉಲ್ಲಂಘಿಸಿ, ಅಧಿಕಾರಿಗೆ ನಿಂದಿಸಿದ ಮಹಿಳೆ ಅರೆಸ್ಟ್​​..!

masthmagaa.com:

ಒಡಿಶಾ: ಕೊರೋನಾ ವೈರಸ್ ಹಿನ್ನೆಲೆಯಲ್ಲಿ ದೇಶದಲ್ಲಿ ಲಾಕ್​​ಡೌನ್ ಹೇರಲಾಗಿದೆ. ಆದ್ರೆ ಕೆಲವರು ಲಾಕ್​ಡೌನ್ ನಿಯಮ ಉಲ್ಲಂಘಿಸಿ ರೋಡಲ್ಲಿ ಓಡಾಡ್ತಿದ್ದಾರೆ. ಇದೇ ರೀತಿ ಒಡಿಶಾದ ಜಜ್​ಪುರದಲ್ಲಿ ಲಾಕ್​ಡೌನ್ ಉಲ್ಲಂಘಿಸಿದ ಮಹಿಳೆಯೊಬ್ಬರನ್ನು ಅರೆಸ್ಟ್ ಮಾಡಲಾಗಿದೆ.

ಕಳಿಂಗನಗರದ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಮಹಿಳೆ ಲಾಕ್​ಡೌನ್ ನಡುವೆ ತಮ್ಮ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರು. ಈ ವೇಳೆ ಲಾಕ್​ಡೌನ್ ಪರಿಶೀಲಿಸುತ್ತಿದ್ದ ಬ್ಲಾಕ್​ ಡೆವಲಪ್​ಮೆಂಟ್ ಅಧಿಕಾರಿ ಮತ್ತವರ ತಂಡ ಮಹಿಳೆಯನ್ನು ತಡೆದಿದೆ. ಈ ವೇಳೆ ಮಹಿಳೆ ಅಧಿಕಾರಿಯ ಮಾಸ್ಕ್​ ಎಳೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಜೊತೆಗೆ ಅವರ ಜೊತೆಗಿದ್ದ ಇತರೆ ಅಧಿಕಾರಿಗಳ ಮೊಬೈಲ್ ಕಿತ್ತು, ದಾಂಧಲೆ ನಡೆಸಿದ್ದಾರೆ. ಸದ್ಯ ಮಹಿಳೆಯನ್ನು ಅರೆಸ್ಟ್ ಮಾಡಿರುವ ಪೊಲೀಸರು ಲಾಕ್​ಡೌನ್ ಉಲ್ಲಂಘನೆ ಮತ್ತು ಅಧಿಕಾರಿಗಳಿಗೆ ನಿಂದಿಸಿದ ಆರೋಪದ ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ.

masthmagaa.com

Contact Us for Advertisement

Leave a Reply