masthmagaa.com:

ತಮಿಳುನಾಡಿನ ಉತ್ತರ ಭಾಗ, ಆಂಧ್ರಪ್ರದೇಶದ ಕರಾವಳಿ ಸೇರಿದಂತೆ ಅಕ್ಕಪಕ್ಕದ ಭಾಗಗಳಲ್ಲಿ ಕಡಿಮೆ ಮತ್ತು ಮಧ್ಯ-ಉಷ್ಣವಲಯ ಮಟ್ಟದಲ್ಲಿ ಚಂಡಮಾರುತದ ಪ್ರಸರಣವಿದೆ. ಇದರ ಪರಿಣಾಮ ಮುಂದಿನ 5 ದಿನಗಳ ಕಾಲ  ಕೇರಳ, ತಮಿಳುನಾಡು ಮತ್ತು ಪುದುಚೆರಿಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಅಂತ ಭಾರತೀಯ ಹವಾಮಾನ ಇಲಾಖೆ (Indian Meteorological Department) ಮುನ್ಸೂಚನೆ ನೀಡಿದೆ. ಇದರ ಬೆನ್ನಲ್ಲೇ ತಮಿಳುನಾಡು, ಆಂಧ್ರ, ಕೇರಳದ ಹಲವೆಡೆ ಮಳೆಯಾಗುತ್ತಿದೆ. ಹೀಗಾಗಿ ಕರ್ನಾಟಕದ ದಕ್ಷಿಣ ಒಳನಾಡು ಭಾಗಗಳಲ್ಲೂ ಮಳೆಯಾಗುವ ಸಾಧ್ಯತೆ ಇದೆ. ಭಾರತೀಯ ಹವಾಮಾನ ಇಲಾಖೆ ಬಿಡುಗಡೆ ಮಾಡಿರುವ ಉಪಗ್ರಹ ಚಿತ್ರದಲ್ಲೂ ಇದು ಗೊತ್ತಾಗಿದೆ.

-masthmagaa.com

Contact Us for Advertisement

Leave a Reply