ದೇಶದಲ್ಲಿ ಕೊರೋನಾ ಆರ್ಭಟ.. ಮೂರೇ ದಿನದಲ್ಲಿ 1.40 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು

masthmagaa.com:

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 48,916ಜನರಿಗೆ ಹೊಸದಾಗಿ ಸೋಂಕು ತಗುಲಿದೆ ಅಂತ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಕೇವಲ ಮೂರೇ ದಿನದಲ್ಲಿ 1.40 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದೃಢಪಟ್ಟಿದ್ದು, ಮೂರು ದಿನದಲ್ಲಿ ಎರಡೂವರೆ ಸಾವಿರಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಸದ್ಯ ದೇಶದಲ್ಲಿ ದೃಢಪಟ್ಟ ಒಟ್ಟು ಪ್ರಕರಣಗಳ ಸಂಖ್ಯೆ 13 ಲಕ್ಷದ ಗಡಿ ದಾಟಿದ್ದು 13,36,861 ಆಗಿದೆ.

ಕಳೆದ 24 ಗಂಟೆಗಳಲ್ಲಿ 757 ಸೋಂಕಿತರು ಮೃತಪಟ್ಟಿದ್ದು, ಒಟ್ಟು ಮೃತಪಟ್ಟ ಸೋಂಕಿತರ ಸಂಖ್ಯೆ 31,358 ಆಗಿದೆ. ಕಳೆದ 24 ಗಂಟೆಗಳಲ್ಲಿ 32,222 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಒಟ್ಟು 8,49,431 ಸೋಂಕಿತರು ಗುಣಮುಖರಾದಂತಾಗಿದ್ದು 4,56,071 ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜುಲೈ 24ರಂದು ದೇಶದಲ್ಲಿ ದಾಖಲೆಯ 4.20 ಲಕ್ಷ ಸ್ಯಾಂಪಲ್​ಗಳನ್ನ ಪರೀಕ್ಷಿಸಲಾಗಿದೆ. ಇದುವರೆಗೆ ಒಟ್ಟು 1.58 ಕೋಟಿ ಸ್ಯಾಂಪಲ್​ಗಳನ್ನ ಪರೀಕ್ಷೆ ಮಾಡಲಾಗಿದೆ ಅಂತ ಐಸಿಎಂಆರ್ ಹೇಳಿದೆ.

ಕೊರೋನಾ ಪೀಡಿತ ಟಾಪ್​-10 ರಾಜ್ಯಗಳು:

1. ಮಹಾರಾಷ್ಟ್ರ: 3.57 ಲಕ್ಷ ಪ್ರಕರಣ (13,132 ಸಾವು)

2. ತಮಿಳುನಾಡು: 1.99 ಲಕ್ಷ ಪ್ರಕರಣ (3,320 ಸಾವು)

3. ದೆಹಲಿ: 1.28 ಲಕ್ಷ ಪ್ರಕರಣ (3,777 ಸಾವು)

4. ಕರ್ನಾಟಕ: 85,000+ ಪ್ರಕರಣ (1,724 ಸಾವು)

5. ಆಂಧ್ರಪ್ರದೇಶ: 80,000+ ಪ್ರಕರಣ (933 ಸಾವು)

6. ಉತ್ತರಪ್ರದೇಶ: 60,000 ಪ್ರಕರಣ (1,348 ಸಾವು)

7. ಗುಜರಾತ್: 53,000+ ಪ್ರಕರಣ (2,278 ಸಾವು)

8. ಪಶ್ಚಿಮ ಬಂಗಾಳ: 53,000+ ಪ್ರಕರಣ (1,290 ಸಾವು)

9. ತೆಲಂಗಾಣ: 52,000+ ಪ್ರಕರಣ (455 ಸಾವು)

10. ರಾಜಸ್ಥಾನ: 34,000+ ಪ್ರಕರಣ (602 ಸಾವು)

-masthmagaa.com

Contact Us for Advertisement

Leave a Reply