masthmagaa.com:

ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಮಾಡಿದ ಎಡವಟ್ಟು ನಗೆಪಾಟಲು ಮತ್ತು ವಿವಾದಕ್ಕೆ ಗುರಿಯಾಗಿದೆ. ಏನಾಗಿದೆ ಅಂದ್ರೆ, ಮುಂದಿನ ವರ್ಷ ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಅದಕ್ಕಾಗಿ ಬಿಜೆಪಿ ಈಗಿಂದಾನೇ ತಯಾರಿ ಮಾಡಿಕೊಳ್ತಿದೆ. ಇದರ ಸಲುವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಎರಡು ದಿನಗಳ ಕಾಲ ಪಶ್ಚಿಮ ಬಂಗಾಳ ಪ್ರವಾಸ ಕೈಗೊಂಡಿದ್ದಾರೆ. ಮೊದಲ ದಿನವಾದ ಇವತ್ತು ಬಂಕುರ ಎಂಬಲ್ಲಿ ಬುಡಕಟ್ಟು ಮತಗಳನ್ನ ಸೆಳೆಯಲು ಮುಂದಾದ್ರು. ಅಲ್ಲಿ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಪ್ರತಿಮೆಗೆ ಮಾಲಾರ್ಪಣೆ ಮಾಡಬೇಕಿತ್ತು. ಇನ್ನೇನು ಅಮಿತ್ ಶಾ ಮಾಲಾರ್ಪಣೆ ಮಾಡಬೇಕು ಎನ್ನುವಷ್ಟರಲ್ಲಿ ಅದು ಬಿರ್ಸಾ ಮುಂಡಾ ಅವರ ಪ್ರತಿಮೆ ಅಲ್ಲ. ಅದು ಸಾಮಾನ್ಯ ಬೇಟೆಗಾರನೊಬ್ಬನ ಮೂರ್ತಿ ಅಂತ ಅಲ್ಲಿ ಸೇರಿದ್ದವರು ಹೇಳಿದ್ದಾರೆ. ತಮ್ಮ ಎಡವಟ್ಟಿನ ಬಗ್ಗೆ ಎಚ್ಚೆತ್ತ ಬಿಜೆಪಿ ನಾಯಕರು ತಕ್ಷಣ ಬಿರ್ಸಾ ಮುಂಡಾ ಅವರ ಫೋಟೋ ತಂದು ಪ್ರತಿಮೆಯ ಕೆಳಗೆ ಇಟ್ಟಿದ್ದಾರೆ. ಬಳಿಕ ಅಮಿತ್ ಶಾ ಆ ಫೋಟೋಗೆ ಪುಷ್ಪ ನಮನ ಸಲ್ಲಿಸಿದ್ದಾರೆ. ಇದು ನಗೆಪಾಟಲಿಗೆ ಗುರಿಯಾದ ವಿಚಾರ. ಇನ್ನು ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ ಫೋಟೋವನ್ನು ಸಾಮಾನ್ಯ ಬೇಟೆಗಾರನ ಪ್ರತಿಮೆಯ ಕಾಲ ಬಳಿ ಇಟ್ಟಿದ್ದು ವಿವಾದಕ್ಕೆ ಗುರಿಯಾಗಿದೆ. ಇದಕ್ಕೆ ಬುಡಕಟ್ಟು ಸಮುದಾಯದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಷ್ಟೆಲ್ಲಾ ಆದರೂ, ಅಮಿತ್ ಶಾ ಅವರು ಟ್ವೀಟ್ ಮಾಡಿ, ‘ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಅವರಿಗೆ ಪುಷ್ಪ ನಮನ ಸಲ್ಲಿಸಿದ್ದೇನೆ’ ಅಂತ ಬರೆದುಕೊಂಡಿದ್ದಾರೆ. ಇದಕ್ಕೆ ‘ಬಿಜೆಪಿಯವರು ಹೊರಗಿನವರು’ ಅಂತ ತೃಣಮೂಲ ಕಾಂಗ್ರೆಸ್ ಗೇಲಿ ಮಾಡಿದೆ.

-masthmagaa.com

Contact Us for Advertisement

Leave a Reply