ದೆಹಲಿ ವೈದ್ಯನಿಂದ ಗರ್ಭಿಣಿ ಹೆಂಡತಿಗೂ ಕೊರೋನಾ ಸೋಂಕು..!

masthmagaa.com:

ದೆಹಲಿಯ ಪ್ರತಿಷ್ಠಿತ ಏಮ್ಸ್​ ಆಸ್ಪತ್ರೆಯ ವೈದ್ಯರೊಬ್ಬರಿಗೆ ಕೊರೋನಾ ವೈರಸ್ ತಗುಲಿರೋದು ದೃಢಪಟ್ಟಿದೆ. ಮತ್ತೊಂದು ಆಘಾತಕಾರಿ ವಿಚಾರ ಅಂದ್ರೆ ಆ ವೈದ್ಯನಿಂದ ಆತನ 9 ತಿಂಗಳು ಗರ್ಭಿಣಿ ಪತ್ನಿಗೂ ಸೋಂಕು ತಗುಲಿದೆ. ಸ್ವತಃ ಡಾಕ್ಟರ್​ ಆಗಿರೋ ಗರ್ಭಿಣಿಯನ್ನ ಐಸೋಲೇಷನ್​ನಲ್ಲಿ ಇಡಲಾಗಿದ್ದು, ಏಮ್ಸ್​ನಲ್ಲೇ ಡೆಲಿವರಿ ಮಾಡೋದಾಗಿ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.

ಕೊರೋನಾ ಸೋಂಕಿತ ವೈದ್ಯ ಆಸ್ಪತ್ರೆಯಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡ ಹಿನ್ನೆಲೆ ಅವರ ಸಂಪರ್ಕಕ್ಕೆ ಬಂದಿರುವ ವ್ಯಕ್ತಿಗಳನ್ನು ಪತ್ತೆಹಚ್ಚುವ ಕೆಲಸ ನಡೆಯುತ್ತಿದೆ. ಈ ಮೂಲಕ ದೆಹಲಿಯಲ್ಲಿ 8 ವೈದ್ಯರು ಕೊರೋನಾ ಸೋಂಕಿಗೆ ತುತ್ತಾದಂತಾಗಿದೆ.

ಸದ್ಯ ವೈದ್ಯನನ್ನು ದೆಹಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾದಲ್ಲಿ ಇಡಲಾಗಿದೆ. ಜೊತೆಗೆ ಅವರ ಕುಟುಂಬಸ್ಥರನ್ನು ಸ್ಕ್ರೀನಿಂಗ್​ಗೆ ಒಳಪಡಿಸಲಾಗಿದೆ.

ಗುರುವಾರಷ್ಟೇ ಏಮ್ಸ್​ ಆಸ್ಪತ್ರೆಯ ಮುಂಭಾಗದಲ್ಲಿರೋ ಸಫ್ದರ್​ಜಂಗ್ ಆಸ್ಪತ್ರೆಯ ಇಬ್ಬರು ವೈದ್ಯರಿಗೆ ಸೋಂಕು ಹರಡಿತ್ತು. ಇದರಲ್ಲಿ ಒಬ್ಬರು ಇತ್ತೀಚೆಗಷ್ಟೇ ದುಬೈನಿಂದ ಭಾರತಕ್ಕೆ ಬಂದಿದ್ದರು. ಮತ್ತೊಬ್ಬ ವೈದ್ಯರು ಕೊರೋನಾ ಸೋಂಕಿತ ರೋಗಿಯ ಸಂಪರ್ಕಕ್ಕೆ ಬಂದಿದ್ದರು ಎನ್ನಲಾಗಿದೆ.

-masthmagaa.com

Contact Us for Advertisement

Leave a Reply