masthmagaa.com:

ದೆಹಲಿ: 3ನೇ ಹಂತದ ಪ್ರಯೋಗ ಮುಗಿಸೋಕೂ ಮುನ್ನವೇ ಕೋವ್ಯಾಕ್ಸಿನ್​​​ಗೆ ಗ್ರೀನ್ ಸಿಗ್ನಲ್ ನೀಡಿರೋದು ಯಾಕೆ ಎಂದು ಟೀಕಿಸಿದ್ದ ವಿಪಕ್ಷಿಗಳಿಗೆ ಭಾರತ್ ಬಯೋಟೆಕ್ ಚೇರ್​ಮನ್ ಕೃಷ್ಣ ಎಲ್ಲಾ ತಿರುಗೇಟು ಕೊಟ್ಟಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಲಸಿಕೆಯ ಪ್ರಭಾವದ ಕುರಿತು ಮಾಹಿತಿ ಇಲ್ಲದೇ ಅದಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದೆ ಅನ್ನೋ ವಾದವನ್ನು ನಿರಾಕರಿಸಿದ್ರು. ಅಲ್ಲದೆ ನಮಗೆ ಅನುಭವ ಇಲ್ಲ ಅನ್ನೋ ಆರೋಪ ಮಾಡಬೇಡಿ.. ನಮಗೂ ಹಲವು ಲಸಿಕೆಗಳನ್ನು ಉತ್ಪಾದಿಸಿದ ಅನುಭವವಿದೆ. ನಮ್ಮದೂ ಜಾಗತಿಕ ಕಂಪನಿಯೇ.. ನಮ್ಮ ಲಸಿಕೆಯ ಎಲ್ಲಾ ದಾಖಲೆಗಳು ಸಾರ್ವಜನಿಕಗೊಳಿಸಲಾಗಿದೆ. ಯಾವುದನ್ನೂ ಮುಚ್ಚಿಟ್ಟಲ್ಲ ಅಂದ್ರು.

ಈ ನಡುವೆ ಭಾರತ್ ಬಯೋಟೆಕ್ ಸಂಸ್ಥೆ ಇಂಟ್ರಾಜೆನಲ್ ಅಂದ್ರೆ ಮೂಗಿನ ಮೂಲಕ ಹಾಕುವ ಲಸಿಕೆ ಅಭಿವೃದ್ಧಿಗೆ ಕೆಲಸ ಮಾಡ್ತಾ ಇದೆ. ಈ ಬಗ್ಗೆ ಸಂಸ್ಥೆ ಚೇರ್​​​ಮನ್ ಡಾ.ಕೃಷ್ಣ ಎಲ್ಲಾ ಸುಳಿವು ಕೊಟ್ಟಿದ್ದಾರೆ. ಮೂಗಿನ ಮೂಲಕ ಹಾಕುವ ಲಸಿಕೆಯಿಂದ ನೋವು ಕಡಿಮೆಯಾಗಲಿದೆ. ಜೊತೆಗೆ ಲಸಿಕೆಯ ಸಾಗಾಟವೂ ಕಷ್ಟವಾಗೋದಿಲ್ಲ.. ಒಂದು ಡೋಸ್ ಲಸಿಕೆ ಸಾಕಾಗುತ್ತೆ.. ಮೂಗಿನ ಎರಡೂ ಹೊಳ್ಳೆಗಳಲ್ಲಿ ಒಂದೊಂದು ಹನಿ ಹಾಕಿಸಿಕೊಂಡ್ರೆ ಮುಗೀತು ಅಂತ ಅಭಿಪ್ರಾಯಪಟ್ಟಿದ್ದಾರೆ.

-masthmagaa.com

Contact Us for Advertisement

Leave a Reply