ಮುಸ್ಲಿಮರ ಬಳಿ ತರಕಾರಿ ಖರೀದಿಸಬೇಡಿ: ಬಿಜೆಪಿ ಶಾಸಕನ ವಿವಾದದ ಮಾತು

masthmagaa.com:

ಉತ್ತರ ಪ್ರದೇಶ: ದೇಶದಲ್ಲಿ ಕೊರೋನಾ ವಿರುದ್ಧ ಎಲ್ಲರೂ ಒಂದಾಗಿ ಹೋರಾಡ್ತಿದ್ದಾರೆ. ಇಂತಹ ಸಮಯದಲ್ಲಿ ಉತ್ತರ ಪ್ರದೇಶದ ಡಿಯೋರಿಯಾ ಕ್ಷೇತ್ರದ ಬಿಜೆಪಿ ಶಾಸಕ ಸುರೇಶ್ ತಿವಾರಿ, ಮುಸ್ಲಿಂ ವ್ಯಾಪಾರಿಗಳಿಂದ ತರಕಾರಿ ಖರೀದಿಸಬೇಡಿ ಎಂದು ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.

ಇವರ ವಿಡಿಯೋವೊಂದು ವೈರಲ್ ಆಗಿದ್ದು ಅದರಲ್ಲಿ, ಒಂದು ವಿಚಾರವನ್ನು ನೆನಪಿನಲ್ಲಿಡಿ.. ಎಲ್ಲರಿಗೂ ಬಹಿರಂಗವಾಗಿ ಹೇಳ್ತಿದ್ದೀನಿ.. ನೀವು ಮುಸ್ಲಿಂ ವ್ಯಾಪಾರಿಗಳಿಂದ ತರಕಾರಿ ಖರೀದಿಸಬೇಡಿ ಅಂತ ಹೇಳಿದ್ದಾರೆ.

ಈ ವಿಡಿಯೋ ವೈರಲ್ ಆಗ್ತಿದ್ದಂತೆ ಮುಗಿಬಿದ್ದ ಸಮಾಜವಾದಿ ಪಕ್ಷ, ಸುರೇಶ್ ತಿವಾರಿ ವಿರುದ್ಧ ಕ್ರಮ ಕೈಗೊಂಡು ದೇಶದ್ರೋಹದ ಕೇಸ್ ದಾಖಲಿಸಬೇಕು ಅಂತ ಹೇಳಿದೆ. ಬಿಜೆಪಿ ಕೂಡ ಸುರೇಶ್ ಹೇಳಿಕೆಯನ್ನು ಖಂಡಿಸಿದ್ದು, ದೇಶವೇ ಒಂದಾಗಿ ಮಹಾಮಾರಿ ವಿರುದ್ಧ ಹೋರಾಡ್ತಿರುವ ಈ ಸಮಯದಲ್ಲಿ ಇಂತಹ ವಿಭಜನಕಾರಿ ಹೇಳಿಕೆ ಸರಿಯಲ್ಲ. ಯಾರು ಯಾರ ಬಳಿ ಬೇಕಾದ್ರು ವಸ್ತುಗಳನ್ನು ಖರೀದಿಸಬಹುದು.. ಇದು ಅವರವರ ವೈಯಕ್ತಿಕ ವಿಚಾರ ಎಂದಿದೆ.

ಆದ್ರೆ ಸುರೇಶ್ ತಿವಾರಿ ಮಾತ್ರ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ ಹಲವರು ನನ್ನ ಬಳಿ ಬಂದು, ಮುಸ್ಲಿಂ ವ್ಯಾಪಾರಿಗಳು ತರಕಾರಿಗೆ ಎಂಜಲು ಹಚ್ಚಿ ಮಾರಾಟ ಮಾಡ್ತಿದ್ದಾರೆ ಅಂತ ಆರೋಪಿಸಿದ್ರು. ಹೀಗಾಗಿ ನಾನು ಆ ರೀತಿ ಹೇಳಿಕೆ ನೀಡಿದೆ.. ಅದ್ರಲ್ಲಿ ತಪ್ಪೇನಿದೆ ಅಂತ ಮಪ್ರಶ್ನೆ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply