masthmagaa.com:

ಮಾರ್ಚ್ ತಿಂಗಳ ಮೊದಲ ದಿನವೇ ಮುಂಬೈ ಷೇರುಪೇಟೆ ಭರ್ಜರಿ ಏರಿಕೆ ಕಂಡಿದೆ. ಇವತ್ತು ಸಂವೇದಿ ಸೂಚ್ಯಂಕ 749 ಅಂಕ ಏರಿಕೆ ಕಂಡು 49,849ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 232 ಅಂಕ ಏರಿಕೆ ಕಂಡು 14,761 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 8 ಪೈಸೆ ಕುಸಿದು ₹ 73.55 (73 ರೂಪಾಯಿ 55 ಪೈಸೆ) ಆಗಿದೆ.

ಇನ್ನು ಚಿನ್ನ – ಬೆಳ್ಳಿ ಬೆಲೆ ವಿಚಾರಕ್ಕೆ ಬಂದ್ರೆ, 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 594 ರೂಪಾಯಿ ಕಮ್ಮಿಯಾಗಿ 45,976 ರೂಪಾಯಿ ಆಗಿದೆ. 1 ಕೆಜಿ ಬೆಳ್ಳಿ ಬೆಲೆ 155 ರೂಪಾಯಿ ಕಮ್ಮಿಯಾಗಿ 68,466 ರೂಪಾಯಿ ಆಗಿದೆ. ಈ ಎಲ್ಲಾ ದರಗಳು 3 ಪರ್ಸೆಂಟ್ ಜಿಎಸ್​ಟಿ ಮತ್ತು ಮೇಕಿಂಗ್ ಚಾರ್ಜಸ್ ಒಳಗೊಂಡಿರೋದಿಲ್ಲ.

-masthmagaa.com

Contact Us for Advertisement

Leave a Reply