ದೇಶದಲ್ಲಿ 50,000 ಸಮೀಪಿಸಿದ ಒಂದು ದಿನದ ಪ್ರಕರಣ.. ಸಾವಿನಲ್ಲಿ 6ನೇ ಸ್ಥಾನಕ್ಕೆ

masthmagaa.com:

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲೆಯ 49,310 ಜನರಿಗೆ ಹೊಸದಾಗಿ ಸೋಂಕು ತಗುಲಿದೆ ಅಂತ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಕೇವಲ 2 ದಿನದಲ್ಲಿ 95 ಸಾವಿರ ಕೊರೋನಾ ಸೋಂಕಿನ ಪ್ರಕರಣಗಳು ದೃಢಪಟ್ಟಿರೋದು ಆತಂಕದ ವಿಚಾರ. ಸದ್ಯ ದೇಶದಲ್ಲಿ ದೃಢಪಟ್ಟ ಒಟ್ಟು ಪ್ರಕರಣಗಳ ಸಂಖ್ಯೆ ಬರೋಬ್ಬರಿ 12,87,945 ಆಗಿದೆ.

ಕಳೆದ 24 ಗಂಟೆಗಳಲ್ಲಿ 740 ಸೋಂಕಿತರು ಮೃತಪಟ್ಟಿದ್ದು, ಒಟ್ಟು ಮೃತಪಟ್ಟ ಸೋಂಕಿತರ ಸಂಖ್ಯೆ 30,601 ಆಗಿದೆ. ಈ ಮೂಲಕ ಕೊರೋನಾ ಸೋಂಕಿನಿಂದ ಹೆಚ್ಚು ಸಾವು ಸಂಭವಿಸಿದ ದೇಶಗಳ ಪಟ್ಟಿಯಲ್ಲಿ ಭಾರತ 6ನೇ ಸ್ಥಾನಕ್ಕೆ ಬಂದಿದೆ.

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 34,602 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಒಟ್ಟು 8,17,209 ಸೋಂಕಿತರು ಗುಣಮುಖರಾದಂತಾಗಿದ್ದು 4,40,135 ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜುಲೈ 23ರಂದು ದೇಶದಲ್ಲಿ 3.52 ಲಕ್ಷ ಸ್ಯಾಂಪಲ್​ಗಳನ್ನ ಪರೀಕ್ಷಿಸಲಾಗಿದೆ. ಇದುವರೆಗೆ ಒಟ್ಟು 1.54 ಕೋಟಿ ಸ್ಯಾಂಪಲ್​ಗಳನ್ನ ಪರೀಕ್ಷೆ ಮಾಡಲಾಗಿದೆ ಅಂತ ಐಸಿಎಂಆರ್ ಹೇಳಿದೆ.

ಕೊರೋನಾ ಪೀಡಿತ ಟಾಪ್​-10 ರಾಜ್ಯಗಳು:

1. ಮಹಾರಾಷ್ಟ್ರ: 3.47 ಲಕ್ಷ ಪ್ರಕರಣ (12,854 ಸಾವು)

2. ತಮಿಳುನಾಡು: 1.92 ಲಕ್ಷ ಪ್ರಕರಣ (3,232 ಸಾವು)

3. ದೆಹಲಿ: 1.27 ಲಕ್ಷ ಪ್ರಕರಣ (3,745 ಸಾವು)

4. ಕರ್ನಾಟಕ: 80,863 ಪ್ರಕರಣ (1,616 ಸಾವು)

5. ಆಂಧ್ರಪ್ರದೇಶ: 72,711 ಪ್ರಕರಣ (884 ಸಾವು)

6. ಉತ್ತರಪ್ರದೇಶ: 58,104 ಪ್ರಕರಣ (1,289 ಸಾವು)

7. ಗುಜರಾತ್: 52,477 ಪ್ರಕರಣ (2,252 ಸಾವು)

8. ಪಶ್ಚಿಮ ಬಂಗಾಳ: 51,757 ಪ್ರಕರಣ (1,255 ಸಾವು)

9. ತೆಲಂಗಾಣ: 50,826 ಪ್ರಕರಣ (447 ಸಾವು)

10. ರಾಜಸ್ಥಾನ: 33,220 ಪ್ರಕರಣ (594 ಸಾವು)

-masthmagaa.com

Contact Us for Advertisement

Leave a Reply