masthmagaa.com:

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲೆಯ 45,720 ಜನರಿಗೆ ಹೊಸದಾಗಿ ಸೋಂಕು ತಗುಲಿದೆ ಅಂತ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ದೇಶದಲ್ಲಿ ಸೋಂಕು ಕಾಣಿಸಿಕೊಂಡಾಗಿನಿಂದ ದೃಢಪಟ್ಟ ಅತಿ ಹೆಚ್ಚು ಪ್ರಕರಣ ಇದಾಗಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ ಬರೋಬ್ಬರಿ 12 ಲಕ್ಷದ ಗಡಿ ದಾಟಿದ್ದು 12,38,635 ಆಗಿದೆ.

ಕಳೆದ 24 ಗಂಟೆಗಳಲ್ಲಿ 1,129 ಸೋಂಕಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ದೇಶದಲ್ಲಿ ಒಟ್ಟು ಮೃತಪಟ್ಟ ಸೋಂಕಿತರ ಸಂಖ್ಯೆ 29,861 ಆಗಿದ್ದು 30 ಸಾವಿರ ಸಮೀಪಿಸಿದೆ. ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಸಾವು ಸಂಭವಿಸಿದ್ದು, ತಮಿಳುನಾಡು ಮತ್ತು ಗುಜರಾತ್ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿವೆ.

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲೆಯ 29,556 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಒಟ್ಟು 7,82,606 ಸೋಂಕಿತರು ಗುಣಮುಖರಾದಂತಾಗಿದ್ದು 4,26,167 ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದೇಶದಲ್ಲಿ ನಿನ್ನೆ 3.50 ಲಕ್ಷ ಸ್ಯಾಂಪಲ್​ಗಳನ್ನ ಪರೀಕ್ಷಿಸಲಾಗಿದೆ. ಇದುವರೆಗೆ ಒಟ್ಟು 1.50 ಕೋಟಿ ಸ್ಯಾಂಪಲ್​ಗಳನ್ನ ಪರೀಕ್ಷೆ ಮಾಡಲಾಗಿದೆ ಅಂತ ಐಸಿಎಂಆರ್ ಹೇಳಿದೆ.

ಕೊರೋನಾ ಪೀಡಿತ ಟಾಪ್​-10 ರಾಜ್ಯಗಳು:

1. ಮಹಾರಾಷ್ಟ್ರ: 3.37 ಲಕ್ಷ ಪ್ರಕರಣ (12,556 ಸಾವು)

2. ತಮಿಳುನಾಡು: 1.86 ಲಕ್ಷ ಪ್ರಕರಣ (3,144 ಸಾವು)

3. ದೆಹಲಿ: 1.26 ಲಕ್ಷ ಪ್ರಕರಣ (3,719 ಸಾವು)

4. ಕರ್ನಾಟಕ: 75,833 ಪ್ರಕರಣ (1,519 ಸಾವು)

5. ಆಂಧ್ರಪ್ರದೇಶ: 64,713 ಪ್ರಕರಣ (823 ಸಾವು)

6. ಉತ್ತರಪ್ರದೇಶ: 55,588 ಪ್ರಕರಣ (1,263 ಸಾವು)

7. ಗುಜರಾತ್: 51,399 ಪ್ರಕರಣ (2,224 ಸಾವು)

8. ಪಶ್ಚಿಮ ಬಂಗಾಳ: 49,321 ಪ್ರಕರಣ (1,221 ಸಾವು)

9. ತೆಲಂಗಾಣ: 49,259 ಪ್ರಕರಣ (438 ಸಾವು)

10. ರಾಜಸ್ಥಾನ: 32,334 ಪ್ರಕರಣ (583 ಸಾವು)

-masthmagaa.com

Contact Us for Advertisement

Leave a Reply