‘ಬಿಗ್​ ಬಿ’ ಮನೆ ಈಗ ಕಂಟೈನ್​ಮೆಂಟ್ ಜೋನ್.. ಬಚ್ಚನ್ ಸಂಪರ್ಕದಲ್ಲಿದ್ದ 100 ಜನಕ್ಕೆ ನಡುಕ

masthmagaa.com:

ಬಿಗ್​ ಬಿ ಅಮಿತಾಬ್ ಬಚ್ಚನ್​ ಮತ್ತು ಅಭಿಷೇಕ್ ಬಚ್ಚನ್​ಗೆ ಕೊರೋನಾ ತಗುಲಿರೋದ್ರಿಂದ ಅವರ ಮುಂಬೈನ ಜಲ್ಸಾ ನಿವಾಸವನ್ನು ಕಂಟೈನ್​ಮೆಂಟ್​ ಜೋನ್​ ಅಂತ ಘೋಷಿಸಲಾಗಿದ್ದು, ಸೀಲ್​ಡೌನ್ ಮಾಡಲಾಗಿದೆ. ಹೀಗಾಗಿ ಈ ಮನೆಗೆ ಯಾರೂ ಬರುವಂತಿಲ್ಲ ಮತ್ತು ಮನೆಯಿಂದ ಯಾರೂ ಹೊರ ಹೋಗಲು ಅವಕಾಶವಿಲ್ಲ. ಮನೆ ಮತ್ತು ಮನೆಯ ಆವರಣವನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗಿದೆ. ಸುಮಾರು 18-20 ವೈದ್ಯಕೀಯ ಸಿಬ್ಬಂದಿ ಮನೆಗೆ ಆಗಮಿಸಿ ಇನ್ನುಳಿದವರ ಸ್ಯಾಂಪಲ್​ಗಳನ್ನು ತೆಗೆದುಕೊಂಡಿದ್ದಾರೆ.

ಮತ್ತೊಂದು ತಂಡವು ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಅವರು ಬಳಸಿದ ವಸ್ತುಗಳನ್ನ ಸಂಗ್ರಹಿಸಿದೆ. ಜಲ್ಸಾ ನಿವಾಸವನ್ನು ಹೊರತುಪಡಿಸಿ ಅಮಿತಾಬ್ ಬಚ್ಚನ್​ಗೆ ಸೇರಿದ ಜನಕ್ ಮತ್ತು ಪ್ರತೀಕ್ಷಾ ಕಟ್ಟಡಗಳನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗಿದೆ. ಇಬ್ಬರು ಚಿಕಿತ್ಸೆ ಪಡೆಯುತ್ತಿರುವ ನಾನಾವತಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸುತ್ತಮುತ್ತ ಕೂಡ ಸ್ಯಾನಿಟೈಸ್ ಮಾಡಲಾಗಿದೆ.

ಇದನ್ನೂ ಓದಿ: ಲಿವರ್ ಸಮಸ್ಯೆ, ಲಾಕ್​ಡೌನ್ ಸಂದರ್ಭದಲ್ಲೂ ಶೂಟಿಂಗ್​ನಲ್ಲಿ ಬ್ಯುಸಿ ಇದ್ದ ‘ಬಿಗ್ ಬಿ’

ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಅವರ ಸಂಪರ್ಕಕ್ಕೆ ಸುಮಾರು 100 ಜನ ಬಂದಿರಬಹುದು ಅಂತ ಅಂದಾಜಿಸಲಾಗಿದೆ. ಈ ಹಿನ್ನೆಲೆ ಅವರನ್ನೆಲ್ಲಾ ಪತ್ತೆಹಚ್ಚಿ ಕೊವಿಡ್ ಪರೀಕ್ಷೆ ನಡೆಸಲು ಮುಂಬೈ ಮಹಾನಗರ ಪಾಲಿಕೆ ಸಿದ್ಧತೆ ನಡೆಸಿದೆ.

-masthmagaa.com

Contact Us for Advertisement

Leave a Reply