masthmagaa.com:

ಹಲವು ರಾಜ್ಯಗಳು ಗೋಹತ್ಯೆ ನಿಷೇಧ ಮಸೂದೆಯನ್ನು ಅಂಗೀಕರಿಸಿವೆ. ಕರ್ನಾಟಕದಲ್ಲೂ ಅದನ್ನು ಜಾರಿಗೆ ತರಲು ತಯಾರಿ ನಡೆಸುತ್ತಿದ್ದೇವೆ ಅಂತ ರಾಜ್ಯ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಹೇಳಿದ್ದಾರೆ. ಬೇರೆ ರಾಜ್ಯಗಳಂತೆಯೇ ಕರ್ನಾಟಕದಲ್ಲಿ ಶೀಘ್ರದಲ್ಲೇ ಗೋಹತ್ಯೆ, ಗೋಮಾಂಸ ಮಾರಾಟ ಮತ್ತು ಗೋಮಾಂಸ ಸೇವನೆಯನ್ನು ನಿಷೇಧಿಸುತ್ತೇವೆ ಎಂದಿದ್ದಾರೆ.

ಕೊರೋನಾ ಹಾವಳಿ ಕಡಿಮೆಯಾದ ನಂತರ ಇದಕ್ಕಾಗಿ ತಜ್ಞರ ತಂಡವೊಂದನ್ನು ರಚಿಸುತ್ತೇವೆ. ಅಗತ್ಯಬಿದ್ದರೆ ಈ ತಂಡವು ಉತ್ತರಪ್ರದೇಶ, ಗುಜರಾತ್​ನಂತಹ ರಾಜ್ಯಗಳಿಗೆ ಭೇಟಿ ನೀಡಿ ಅಲ್ಲಿನ ಗೋಹತ್ಯೆ ನಿಷೇಧ ಕಾನೂನು ಕುರಿತು ಅಧ್ಯಯನ ಮಾಡಿ ಬರಲಿದೆ.

ಇದನ್ನೂ ಓದಿ: ದೇಶದಲ್ಲಿ ಹಿಂದೆಂದಿಗಿಂತಲೂ ವೇಗ ಪಡೆದ ಕೊರೋನಾ ವೈರಸ್

ಗೋಹತ್ಯೆ, ಗೋಮಾಂಸ ಮಾರಾಟ ಮತ್ತು ಗೋಮಾಂಸ ಸೇವನೆ ಮೇಲೆ ನಿಷೇಧ ಹೇರುವ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚಿಸುತ್ತೇನೆ. ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ‘ಕರ್ನಾಟಕ ಪ್ರಿವೆನ್ಷನ್​ ಆಫ್ ಸ್ಲಾಟರ್ & ಪ್ರಿಸರ್ವೇಷನ್ ಅಫ್ ಕ್ಯಾಟಲ್ ಬಿಲ್​’ (ರಾಜ್ಯ ಗೋಹತ್ಯೆ ತಡೆಗಟ್ಟುವಿಕೆ ಮತ್ತು ಜಾನುವಾರು ಸಂರಕ್ಷಣೆ ಮಸೂದೆ) ಅನ್ನು ಮಂಡಿಸಲು ಪ್ರಯತ್ನಿಸುತ್ತೇವೆ ಅಂತ ಪ್ರಭು ಚೌಹಾಣ್ ಹೇಳಿದ್ದಾರೆ.

2010ರಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ನಾವು ಮಸೂದೆಯನ್ನು ಮಂಡಿಸಿದ್ದೆವು. ಆಗ ಗೃಹ ವ್ಯವಹಾರಗಳ ಸಚಿವಾಲಯ ಕೆಲ ತಿದ್ದುಪಡಿಗಳನ್ನು ಮಾಡುವಂತೆ ಸೂಚಿಸಿತ್ತು. ನಂತರ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರ ಬಂದ ಮೇಲೆ ಅದು ಜಾರಿಗೆ ಬರಲಿಲ್ಲ ಅಂತ ಸಚಿವ ಪ್ರಭು ಚೌಹಾಣ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply